ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಎಷ್ಟೇ ಬಾರಿ ಬಂದರೂ, ರಾಜ್ಯದಲ್ಲಿ ಬಿಜೆಪಿ ಪಕ್ಷ ( BJP Party ), ಮುಂಬರುವ ಚುನಾವಣೆಯಲ್ಲಿ ( 2023 Election ) ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಭವಿಷ್ಯ ನುಡಿದಿದ್ದಾರೆ.
ಇಂದು ಬೆಂಗಳೂರು ಪ್ರಸ್ ಕ್ಲಬ್ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಪ್ರತಿ ಬಾರಿ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಹೆಸರೇಳಿಕೊಂಡು ಬಿಜೆಪಿ ನಾಯಕರು ಸೀಟು ಗೆಲ್ಲುವ ಪ್ರಯತ್ನಕ್ಕೆ ಇಳಿಯುತ್ತಿದ್ದಾರೆ. ಆದ್ರೇ ಈ ಬಾರಿ ಚುನಾವಣೆಯಲ್ಲಿ ಅವರ ಹೆಸರಿನಾಟ ನಡೆಯೋದಿಲ್ಲ ಎಂದರು.
ರಾಜ್ಯ ಬಿಜೆಪಿ ಸರ್ಕಾರದ ನಡವಳಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಬೇಕಿದ್ದಾರೆ ಬರೆದಿಟ್ಟುಕೊಳ್ಳಿ ಮಂಡ್ಯಕ್ಕೆ ಅಮಿತ್ ಶಾ ಬಂದು ಹೋಗಿದ್ದಾಗರೇ, ರಾಜ್ಯಕ್ಕೆ ಪ್ರಧಾನಿ ಮೋದಿ ನೂರು ಬಾರಿ ಭೇಟಿ ನೀಡಿದರು, ಯಾವುದೇ ಪರಿಣಾಮ ಆಗಲ್ಲ. ಮಂಡ್ಯದಲ್ಲಿ ಏಳು ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲರಿದೆ ಎಂದು ಹೇಳಿದರು.
ಪಂಚರತ್ನ ರಥಯಾತ್ರೆ ನಡೆಸಿದಂತ 45 ಕ್ಷೇತ್ರಗಳ ಪೈಕಿ, 40 ಕ್ಷೇತ್ರಗಳಲ್ಲಿ ಜೆಡಿಎಸ್ ( JDS Party ) ಗೆಲ್ಲುವ ಭರವಸೆಯಿದೆ. ಇದು ಅಲ್ಲಿನ ಕ್ಷೇತ್ರದ ಶ್ರೀರಕ್ಷೆಯಾಗಿದೆ. ನಾಳೆಯೇ ಚುನಾವಣೆ ಆದರೂ ಪಂಚರತ್ನ ರಥಯಾತ್ರೆಯ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.