ಬೆಂಗಳೂರು : ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಕುಶಲಕರ್ಮಿಗಳಿಗೆ ಸಾಲ ಸಹಾಯಧನ ಯೋಜನೆಯಡಿ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು 2023ರ ಜನವರಿ 21 ಕೊನೆಯ ದಿನವಾಗಿದೆ.
76ನೇ ಸ್ವಾತಂತ್ರೋತ್ಸವದ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಘೋಷಿಸಿದಂತೆ ಕುಶಲಕರ್ಮಿಗಳಿಗೆ ಸಾಲ ಸಹಾಯಧನ ಯೋಜನೆಯಡಿ ಕುಶಲಕರ್ಮಿಗಳ ಜೀವನಮಟ್ಟ ಸುಧಾರಿಸಲು, ಕುಶಲಕರ್ಮಿಗಳ ವೃತ್ತಿಯನ್ನು ಅಭಿವೃದ್ದಿಪಡಿಸಿಕೊಳ್ಳಲು /ಮುಂದುವರೆಸಿಕೊಂಡು ಹೋಗಲು ಅನುವಾಗುವಂತೆ ಸರ್ಕಾರದ ಸಹಾಯಧನ ಸೇರಿದಂತೆ ಗರಿಷ್ಠ ರೂ 50,000/- ಗಳವರೆಗೆ ಬ್ಯಾಂಕುಗಳ ಮುಖೇನ ಸಾಲ ಸೌಲಭ್ಯ ಒದಗಿಸಲಾಗುವುದು.
ಈ ನೂತನ ಯೋಜನೆಯಡಿ ಸೌಲಭ್ಯ ಪಡೆಯಲು ಕುಶಲಕರ್ಮಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು, ಕುಶಲಕರ್ಮಿ ವೃತ್ತಿಯಲ್ಲಿ ತೊಡಗಿದಂತವರು ಭರ್ತಿಮಾಡಿದ ನಿಗದಿತ ಅರ್ಜಿಯನ್ನು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳುಳ್ಳ ಪಾಸ್‌ಬುಕ್ ಪ್ರತಿ, ಕೆ.ಹೆಚ್.ಡಿ.ಸಿ ಸಂಸ್ಥೆಯಿಂದ ನೀಡಿದ ಕುಶಲಕರ್ಮಿಯೆಂಬ ಗುರುತಿನ ಚೀಟಿ ಅಥವಾ ಪಿಡಿಒ/ಕೈಗಾರಿಕಾ ಇಲಾಖಾಧಿಕಾರಿಗಳಿಂದ ಕರಕುಶಲರೆಂದು ಪಡೆದ ದೃಡೀಕರಣ ಪತ್ರ, ಚಟುವಟಿಕೆಯ ಯೋಜನಾ ವರದಿ ಲಗತ್ತಿಸಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ 203, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲೂಕು, ಇಲ್ಲಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಛೇರಿ ದೂ.ಸಂಖ್ಯೆ:080-29787458, ಕೈಗಾರಿಕಾ ವಿಸ್ತರಣಾಧಿಕಾರಿ-ದೊಡ್ಡಬಳ್ಳಾಪುರ/ದೇವನಹಳ್ಳಿ-9448844948, ನೆಲಮಂಗಲ -9902740998 , ಹೊಸಕೋಟೆ-9743217605 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಗಾರಿಕಾ ಕೇಂದ್ರದ, ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.