ಮುಂಡಗೋಡ : ತಾಲೂಕಿನಲ್ಲಿ ಪದ್ಮಾಂಬಾ ಪುಟ್ಟಣ್ಣ ಎಂದೇ ಖ್ಯಾತಿ ಪಡೆದಿದ್ದ ವೃಷಭರಾಜ ಅಂಗಡಿ(54) ವಿಧಿವಶರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಪುಟ್ಟಣ್ಣ, ಹುಬ್ಬಳ್ಳಿ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.
ಮುಂಡಗೋಡಿನ ಪದ್ಮಾಂಬಾ ಬುಕ್ ಸ್ಟಾಲ್ ಮಾಲೀಕರಾಗಿದ್ದ ಪುಟ್ಟಣ್ಣ ಅವರು, ತಾಲೂಕಿನ ಬಿ.ಜೆ.ಪಿ. ಸಕ್ರಿಯ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರರನ್ನು ಬಿಟ್ಟು ಅಗಲಿದ್ದಾರೆ. ಇವರ ನಿಧನಕ್ಕೆ ವರ್ತಕರ ಸಂಘದವರು, ಗಣ್ಯರು, ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.