ಗೋವಿನಜೋಳಕ್ಕೆ ಸೈನಿಕ ಹುಳುವಿನ ಬಾಧೆ

Spread the love

ಮುಂಡಗೋಡ : ತಾಲೂಕಿನ ಗ್ರಾಮೀಣ ಭಾಗದಲ್ಲಿನ ಗೋವಿನಜೋಳ ಬೆಳೆಗೆ ಸೈನೀಕ ಹುಳು ಭಾದೆ ಕಂಡು ಬಂದಿದ್ದು ರೈತರು ಸೂಕ್ತ ಔಷಧೋಪಚಾರ ಮಾಡುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಎಂ.ಎಸ್.ಕುಲಕರ್ಣಿ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಸಾವಿರಾರು ರೈತರು ಗೋವಿನಜೋಳ ಬೆಳೆ ಬೆಳೆದಿದ್ದು ಇದೀಗ ಕೆಲವು ಗ್ರಾಮಗಳಲ್ಲಿ ಗೋವಿನಜೋಳ ಬೆಳೆಗೆ ಸೈನೀಕ ಹುಳು ಭಾದೆ ಕಾಣಿಸಿಕೊಂಡಿದೆ. ಈ ಸೈನಿಕ ಹುಳು ಗಿಡದ ಏಲೆಗಳನ್ನು ತಿನ್ನುವ ಮೂಲಕ ಗಿಡದ ಕಾಂಡವನ್ನು ಸಹ ತಿಂದು ಹಾಕುತ್ತದೆ. ಆದ್ದರಿಂದ ಸೈನಿಕ ಹುಳು ಭಾದೆ ಹತೋಟಿಗೆ ತರಲು ರೈತರು ಬೆಳೆಯಲ್ಲಿ ಕೀಟಭಕ್ಷಕ ಪಕ್ಷಿಗಳಿಗೆ ಕುಳಿತುಕೊಳ್ಳಲು ಆಶ್ರಯ ತಾಣ ಮಾಡಬೇಕು. ಪ್ರತಿ ಎಕರೆಗೆ 10ಪಕ್ಷಿಗಳ ಆಶ್ರಯತಾಣ ಅಳವಡಿಸುವುದು ಸೂಕ್ತ. ಮೆಟಾರಿಜಿಯಂರಿಲೈಯ ಶೀಲಿಂಧ್ರವನ್ನು ಪ್ರತಿ ಲೀಟರ ನೀರಿಗೆ 3ಗ್ರಾಂ. ನಂತೆ ಬೆರೆಸಿ 15.20 ದಿನದ ಬೆಳೆಯ ಸುಳಿಯಲ್ಲಿ ಹಾಕಬೇಕು. ನಂತರ ಪ್ರತಿ 10ದಿನಗಳ ಅಂತರದಲ್ಲಿ ಕೀಟದ ಸಂಖ್ಯೆಯನ್ನು ಆಧಾರಿಸಿ ಸಿಂಪರಣೆಯನ್ನು ಮಾಡಬೇಕು.
ಒಂದಾನು ವೇಳೆ ಸೈನಿಕ ಹುಳ ಬಾಧೆಯು ಹೆಚ್ಚಾಗಿ ಕಂಡು ಬಂದರೆ ರೈತರು ರಾಸಾಯನಿಕ ಸಸ್ಯ ಸಂರಕ್ಷಣಾ ಔಷಧಿಗಳಾದ 0.2ರಿಂದ0.4 ಗ್ರಾಂ. ಎಮಾಮೆಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ0.3ಮಿ.ಲೀ ಸ್ಟೈನೋಸ್ಯಾಡ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ 0.4 ಮೀ.ಲೀ. ಕ್ಲೋರ್ಯಾಂಟ್ರಿನಿಲಿಪ್ರೋಲ್ 18.5% ಎಸ್.ಸಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಗೆ ಸಂಪರ್ಕಿಸಲು ಸೂಚಿಸಿದ್ದಾರೆ.