
ಮುಂಡಗೋಡ : ತಾಲೂಕಿನ ಕೊಪ್ಪ ಇಂದಿರಾನಗರ ಹತ್ತಿರ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮವಾಗಿ ಸವಾರನಿಗೆ ಗಾಯವಾದ ಘಟನೆ ಇಂದು ಸಂಭವಿಸಿದೆ.
ಕೋಡಂಬಿ ಗ್ರಾಮದ ರಾಘವೇಂದ್ರ ಅರ್ಕಸಾಲಿ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ.
ಮಾಹಿತಿ ತಿಳಿದು 108 ಆಂಬ್ಯುಲೆನ್ಸ ಸಿಬ್ಬಂದಿಗಳು ಸವಾರನಿಗೆ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೈಕ್ ಸವಾರನ ಬಳಿ ಇದ್ದ ಪರ್ಸ, ಮೊಬೈಲ್, ಎ.ಟಿ.ಎಂ. ಕಾರ್ಡನ್ನು 108 ಆಂಬ್ಯುಲೆನ್ಸ ಸಿಬ್ಬಂದಿಗಳು ಪೊಲೀಸರಿಗೆ ನೀಡಿದ್ದಾರೆ.