ನಮ್ಮ ಸರ್ಕಾರ ‘ವಿದ್ಯುತ್ ದರ ಹೆಚ್ಚಳ’ ಮಾಡಿಲ್ಲ- CM ಸಿದ್ದರಾಮಯ್ಯ ಸ್ಪಷ್ಟನೆ

Spread the love

ಬೆಂಗಳೂರು: ರಾಜ್ಯಾಧ್ಯಂತ ವಿದ್ಯುತ್ ದರ ಹೆಚ್ಚಳದ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಎರಡು ಮೂರು ತಿಂಗಳ ಬಿಲ್ ಒಮ್ಮೆಲೆ ಬಂದಿದ್ದು ಕಂಡು ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶವನ್ನು ಅಲ್ಲಲ್ಲಿ ಪ್ರತಿಭಟನೆಯ ಮೂಲಕ ಹೊರ ಹಾಕುತ್ತಿದ್ದಾರೆ.

ಆದ್ರೇ ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ನಾವು ವಿದ್ಯಾತ್ ದರ ಹೆಚ್ಚಳ ಮಾಡಿಲ್ಲ. ಮಾಡಿದ್ದೇವೆ ಎಂಬುದು ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದಂತ ಅವರು, ವಿದ್ಯುತ್ ದರ ಹೆಚ್ಚಿಸಿದ್ದಾರೆ ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ವಿದ್ಯುತ್ ದರ ಹೆಚ್ಚಳದ ( Electricity Rate hike ) ಬಗ್ಗೆ ಏಪ್ರಿಲ್ 1ರಂದು ತೀರ್ಮಾನವಾಗಿತ್ತು. ಅದನ್ನು ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬರುವ ಮುನ್ನವೇ ಚುನಾವಣಾ ನೀತಿ ಸಂಹಿತೆ ಮುಕ್ತಾಯದ ಬೆನ್ನಲ್ಲೇ ಜಾರಿಗೊಳಿಸಲಾಗಿದೆ ಎಂಬುದಾಗಿ ಹೇಳಿದರು.

ಗ್ಯಾರಂಟಿ ಯೋಜನೆಯಿಂದ ವಿಪಕ್ಷಗಳಿಗೆ ನಡುಕ ಶುರುವಾಗಿದೆ. ಜುಲೈ.1ರಿಂದ ಅನ್ನಭಾಗ್ಯ, ಗೃಹ ಜ್ಯೋತಿ ಆರಂಭಿಸಲಾಗುತ್ತದೆ. ಆಗಸ್ಟ್ 16ರಂದು ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುತ್ತದೆ. 200 ಯೂನಿಟ್ ವರೆಗೆ ವಿದ್ಯುತ್ ಬಳಸಿದ್ರೆ ಉಚಿತ ಎಂದು ತಿಳಿಸಿದರು.