ಮುಂಡಗೋಡ : ಕಳೆದ 3 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಆದರೇ ಇಂದಿನ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಗಮನಕ್ಕೆ ತರದೇ ಕ್ರಿಯಾ ಯೋಜನೆ ಮಾಡಲು ಈಗ ಸಭೆಯಲ್ಲಿ ಮಂಡಿಸಲು ಹೊರಟಿದ್ದಾರೆ ಎಂದು p.
ಪ.ಪಂ.ಉಪಾಧ್ಯಕ್ಷರಾದ ಮಂಜುನಾಥ ಹರಮಲಕರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ ಲಮಾಣಿ ಅವರು ಪ.ಪಂ. ಅಧ್ಯಕ್ಷರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
2021-22 ನೇ ಸಾಲಿನ ಎಸ್.ಎಫ್ ಸಿ ಮುಕ್ತ ನಿಧಿಯಡಿಯಲ್ಲಿ ಹಣ ನಿಗಧಿಯಾದ 30ಲಕ್ಷರೂ. ಕ್ರಿಯಾ ಯೋಜನೆಯಲ್ಲಿ ಪ.ಪಂ. ಅಧ್ಯಕ್ಷರು ಉಪಾಧ್ಯಕ್ಷರಿಗಾಗಲೀ, ಸ್ಥಾಯಿ ಸಮಿತಿ ಅಧ್ಯಕ್ಷರಿಗಾಗಲಿ ಹಾಗೂ ಯಾವುದೇ ಸದಸ್ಯರಿಗಾಗಲಿ ತಿಳಿಸದೇ ಅಜೆಂಡಾ ತಯಾರಿಸಿದ್ದಾರೆ ಎಂದು ಅವರು ಇಂದು ನಡೆದ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ದೂರಿದರು.
ಕಸ ವಿಲೇವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗೋಡೆಬರಹ, ಬೀದಿ ನಾಟಕ, ಚರ್ಚಿಸುತ್ತಿದ್ದಾಗ ಪ.ಪಂ. ಮಾಜಿ ಅಧ್ಯಕ್ಷ ಪಣಿರಾಜ ಹದಳಗಿ ಹಾಗೂ ಪ.ಪಂ. ಸದಸ್ಯ ವಿಶ್ವನಾಥ ಪವಾಡಶೆಟ್ಟರ ಅವರ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.
ಎಸ್.ಎಫ್.ಸಿ. ಯೋಜನೆಯಡಿಯಲ್ಲಿ ನಡೆದ ಕಾಮಗಾರಿ ಸರಿ ಇಲ್ಲವೆಂದು ಪ.ಪಂ. ಸದಸ್ಯ ರಜಾಖಾನ ಪಠಾಣ, ಛಾಯಾಚಿತ್ರಗಳ ಸಮೇತ ಆರೋಪಿಸಿದರು. ಸಭೆ ಮುಗಿಯುವ ಹಂತದಲ್ಲಿರುವಾಗ ಸದಸ್ಯ ರಜಾಖಾನ ಪಠಾಣ ಮಾತನಾಡಿ, ಬಂಕಾಪುರ ರಸ್ತೆ ಪಕ್ಕದಲ್ಲಿ ಮಾಡಿದ ಚರಂಡಿಗೆ ನೀರು ಹೋಗದೆ ರಸ್ತೆ ಮೇಲೆ ರಸ್ತೆ ಮೇಲೆ ನಿಲ್ಲುತ್ತದೆ. ಹಳೂರ ಮಾರಿಕಾಂಬಾ ದೇವಸ್ಥಾನದ ಹತ್ತಿರ ನಿರ್ಮಿಸಿದ ಚರಂಡಿಯು ಸಹ ಸರಿಇಲ್ಲವೆಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನೀಯರ ಶಂಕರ ದಂಡಿನ ಅವರು, ಮಳೆಗಾಲ ಇರುವುದರಿಂದ ಸ್ವಲ್ಪಮಟ್ಟಿಗೆ ತೊಂದರೆ ಆಗಿದೆ. ಬಿಸಿಲು ಬಿದ್ದ ನಂತರ ಕಾಮಗಾರಿ ಮಾಡಿಸಲಾಗುವುದು. ಟೆಂಡರನಲ್ಲಿ ಸಿ.ಡಿ.ಕಾಮಗಾರಿ ಇಲ್ಲ. ಆದರೂ ಗುತ್ತಿಗೆದಾರರ ಮನವೊಲಿಸಿ ಅಲ್ಲಿ ಸಿಡಿ ಮಾಡಲಾಗಿದೆ ಎಂದರು.
ಈ ಸಭೆಯ ಅಧ್ಯಕ್ಷತೆಯನ್ನು ಪ.ಪಂ. ಅಧ್ಯಕ್ಷೆ ರೇಣುಕಾ ಹಾವೇರಿ ವಹಿಸಿದ್ದರು. ಮುಖ್ಯಾಧಿಕಾರಿ ಸಂಗನಬಸಯ್ಯ ಸ್ವಾಗತಿಸಿ ನಂತರ ವಂದಿಸಿದರು. ಸಭೆಯಲ್ಲಿ ಪ.ಪಂ. ಸದಸ್ಯರು ಹಾಜರಿದ್ದರು.