ಕಾರವಾರ : ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರದ ಅವಧಿ ಏಪ್ರಿಲ್ ಅಂತ್ಯದಲ್ಲೇ ಕೊನೆಗೊಂಡಿದೆ. ಕೋವಿಡ್ ಕಾರಣದಿಂದ ಚುನಾವಣೆ ವಿಳಂಬವಾಗಿದ್ದು, ಈಗಾಗಲೇ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ರಾಜ್ಯ ಚುನಾವಣಾ ಆಯೋಗವು, ಕರಡು ಮೀಸಲಾತಿ ಪಟ್ಟಿಯನ್ನು ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಎಂಟು ದಿನಗಳ ಕಾಲಾವಕಾಶ ನೀಡಿದೆ
ಮುಂಡಗೋಡದ 6ತಾ.ಪಂ.ಕ್ಷೇತ್ರಗಳಲ್ಲಿ ಮೀಸಲಾತಿ ಪುನರಾವರ್ತನೆ…
ಮುಂಡಗೋಡ ತಾಲೂಕಿನಲ್ಲಿ ಒಟ್ಟು 11 ತಾಲೂಕ ಪಂಚಾಯತ ಕ್ಷೇತ್ರಗಳಿದ್ದು, ಅವುಗಳ ಪೈಕಿ 6 ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಮೀಸಲಾತಿ ಈ ಬಾರಿಯೂ ಮುಂದುವರೆದಿದೆ.
1)ನಂದಿಕಟ್ಟಾ– ಸಾಮಾನ್ಯ (ಕಳೆದ ಸಲ ಸಾಮಾನ್ಯ)
2)ಬಾಚಣಕಿ– ಸಾಮಾನ್ಯ(ಕಳೆದ ಸಲ ಸಾಮಾನ್ಯ)
3)ಇಂದೂರ– ಸಾಮಾನ್ಯ ಮಹಿಳೆ( ಕಳೆದ ಸಲ ಸಾಮಾನ್ಯ ಮಹಿಳೆ)
4) ಮೈನಳ್ಳಿ(ಗುಂಜಾವತಿ)- ಹಿಂದುಳಿದ ವರ್ಗ ‘ಅ‘. (ಕಳೆದ ಸಲ ಹಿಂದುಳಿದ ವರ್ಗ ‘ಅ‘)
5)ಕಾತೂರ– ಅನುಸೂಚಿತ ಜಾತಿ( ಮಹಿಳೆ), ಕಳೆದ ಸಲ ಅನುಸೂಚಿತ ಜಾತಿ( ಮಹಿಳೆ),
6) ಕೋಡಂಬಿ– ಅನುಸೂಚಿತ ಪಂಗಡ ಮಹಿಳೆ, ಕಳೆದ ಸಲ (ಅನುಸೂಚಿತ ಪಂಗಡ ಮಹಿಳೆ),
7) ಹುನಗುಂದ– ಸಾಮಾನ್ಯ, (ಕಳೆದ ಸಲ ಸಾಮಾನ್ಯ ಮಹಿಳೆ )
8) ಚೌಡಳ್ಳಿ– ಅನುಸೂಚಿತ ಜಾತಿ, (ಕಳೆದ ಸಲ ಸಾಮಾನ್ಯ ಮಹಿಳೆ)
9) ಸಾಲಗಾಂವ( ಚಿಗಳ್ಳಿ) ಹಿಂದುಳಿದ ವರ್ಗ ‘ಅ‘ ಮಹಿಳೆ, (ಕಳೆದ ಸಲ ಅನುಸೂಚಿತ ಜಾತಿ)
10) ಪಾಳಾ– ಸಾಮಾನ್ಯ,( ಕಳೆದ ಸಲ ಹಿಂದುಳಿದ ವರ್ಗ ‘ಅ‘ ಮಹಿಳೆ)
11) ಮಳಗಿ- ಸಾಮಾನ್ಯ ಮಹಿಳೆ (ಕಳೆದ ಸಲ ಸಾಮಾನ್ಯ)
11) ಮಳಗಿ- ಸಾಮಾನ್ಯ ಮಹಿಳೆ (ಕಳೆದ ಸಲ ಸಾಮಾನ್ಯ)