ಮೈನಳ್ಳಿ(ಚಿಗಳ್ಳಿ) ಜಿ.ಪಂ. ಕ್ಷೇತ್ರ : ಮೀಸಲಾತಿ ತಿದ್ದುಪಡಿಗೊಳಿಸುವಂತೆ ಮನವಿ

Spread the love

ಮುಂಡಗೋಡ : ಚುನಾವಣಾ ಆಯೋಗವು ಮುಂಡಗೋಡ ತಾಲೂಕಿನ ಮೈನಳ್ಳಿ(ಚಿಗಳ್ಳಿ) ಜಿ.ಪಂ. ಕ್ಷೇತ್ರ ಹಿಂದುಳಿದ ವರ್ಗ ಅ ಮಹಿಳೆ ಎಂಬ ಮೀಸಲಾತಿ ನೀಡಿದ್ದು, ಈ ಕ್ಷೇತ್ರಕ್ಕೆ ಅನುಸೂಚಿತ ಜಾತಿ (ಎಸ್.ಸಿ.) ಮೀಸಲಾತಿ ಪರಿಗಣಿಸಬೇಕೆಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ ಮುಖಂಡ ಲಕ್ಷ್ಮಣ ಬನ್ಸೊಡೆ ಮನವಿ ಸಲ್ಲಿಸಿದ್ದಾರೆ.

    ಅನುಸೂಚಿತ ಜಾತಿ ಜನಾಂಗದವರು ಚಿಗಳ್ಳಿ(ಮೈನಳ್ಳಿ) ವ್ಯಾಪ್ತಿಯಲ್ಲಿ ಶೇ.27ರಷ್ಟು ಜನಸಂಖ್ಯೆ ಇದ್ದರೂ ನಮ್ಮನ್ನು ಕಡೆಗಣಿಸಲಾಗಿದೆ. ಆದ್ದರಿಂದ ಈಗ ಹೊರಡಿಸಿದ ಮೀಸಲಾತಿ ಆದೇಶವನ್ನು ತಿದ್ದುಪಡಿಗೊಳಿಸಿ ಮರು ಆದೇಶ ಹೊರಡಿಸಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.