ಟಿಬೆಟಿಕಾಲೋನಿಯಲ್ಲಿ ದಲೈಲಾಮಾರ 86ನೇ ಹುಟ್ಟುಹಬ್ಬ ಆಚರಣೆ

Spread the love

ಮುಂಡಗೋಡ : ಟಿಬೆಟನ್ ಧರ್ಮಗುರು ದಲೈಲಾಮಾ ಅವರಿಗೆ ಇಂದು 86ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

  ದಲೈಲಾಮಾರ ಹುಟ್ಟುಹಬ್ಬದ ಕಾರಣ ಇಡೀ ಮುಂಡಗೋಡ ಟಿಬೆಟಿಕಾಲೋನಿಯಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ಟಿಬೆಟಿಕಾಲೋನಿಯ ಬೌದ್ಧಮಠಗಳಲ್ಲಿ ದಲೈಲಾಮಾರ ಹುಟ್ಟುಹಬ್ಬದ ಅಂಗವಾಗಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.

  ಬೌದ್ಧ ದೇವತೆಗಳ ಎದುರು ಬೆಣ್ಣೆ ದೀಪ ಬೆಳಗಿಸಲಾಯಿತು. ವಿವಿಧ ರೀತಿಯ ನೈವೇದ್ಯವನ್ನು ದೇವರಿಗೆ ಹಿರಿಯ ಬೌದ್ಧ ಸನ್ಯಾಸಿಗಳು, ಬಿಕ್ಕುಗಳು ಸಮರ್ಪಿಸಿದರು.

   ಬೌದ್ಧಮಠದಲ್ಲಿ ಎಲ್ಲಾ ಬೌದ್ಧ ಸನ್ಯಾಸಿಗಳು, ಬಿಕ್ಕುಗಳು ಬೌದ್ಧ ದೇವತೆಗಳಿಗೆ ದಲೈಲಾಮಾರ ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಹಿರಿಯ ಬೌದ್ಧ ಸನ್ಯಾಸಿ ಜಂಪಾ ಲಾಮಾ ತಿಳಿಸಿದ್ದಾರೆ.