ಮುಂದಿನ ವರ್ಷವೇ 20 ಸಾವಿರ ಶಿಕ್ಷಕರ ನೇಮಕ – ಸಚಿವ ಮಧು ಬಂಗಾರಪ್ಪ

Spread the love

ಬೆಂಗಳೂರು: ಮುಂದಿನ ವರ್ಷವೇ 20 ಸಾವಿರ ಶಿಕ್ಷಕರ ಮಾಡಿಕೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಅವರು ಕೊಪ್ಪಳದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದಾರೆ. ಇದೇ ವೇಳೆ ಅವರು ಮಾತನಾಡಿ, ರಾಜ್ಯದಲ್ಲಿ 40 ಸಾವಿರ ಶಿಕ್ಷಕರ ಕೊರತೆ ಇದೆ.

2024ರಲ್ಲಿ 20 ಸಾವಿರ ಶಿಕ್ಷಕರ ನೇಮಕ ಮಾಡಲಾಗುವುದು ಅಂತ ಹೇಳಿದರು. ಇನ್ನೂ 3 ವರ್ಷದಲ್ಲಿ 3 ಸಾವಿರ ಕೆಪಿಎಸ್‌ ಶಾಲೆ ಆರಂಭ ಮಾಡಲಾಗುವುದು ಜೊತೆಗೆ 3 ವರ್ಷದಲ್ಲಿ 3 ಸಾವಿರ ಕೆಪಿಎಸ್‌ ಶಾಲೆ ಆರಂಭ ಮಾಡಲಾಗುವುದು ಅಂದರು.

ಪ್ರಸ್ತುತ 13 ಸಾವಿರ ಶಿಕ್ಷಕರ ನೇಮಕ ಸಂಬಂಧಿಸಿದಂತೆ ಇನ್ನೂ ಕೆಲ ಜಿಲ್ಲೆಗಳಲ್ಲಿ ಕೋರ್ಟ್‌ನಲ್ಲಿ ಕೇಸ್‌ ಇರುವುದರಿಂದ ಅಂಥ ಜಿಲ್ಲೆಯಲ್ಲಿ ನೇಮಕ ಪ್ರಕ್ರಿಯೆ ನಡೆಸಿಲ್ಲ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಶನಿವಾರವೇ ಅಭ್ಯರ್ಥಿಗಳಿಗೆ ನೇಮಕ ಪತ್ರ ನೀಡಲಾಗಿದೆ ಅಂತ ಹೇಳಿದರು.