ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ : ಸಿಎಂ ಸಿದ್ದರಾಮಯ್ಯ ವಿಶ್ವಾಸ

Spread the love

ಬೆಂಗಳೂರು : ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ರಾಜ್ಯಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಈವರೆಗೆ ಕಾಂಗ್ರೆಸ್ ಪಕ್ಷದ ಐವರು, ಬಿಜೆಪಿಯ 30 ಹಾಗೂ ಜೆಡಿಎಸ್ ಪಕ್ಷದ ನಾಲ್ವರು ಸೇರಿದಂತೆ 39 ಮಂದಿ ಮತ ಚಲಾಯಿಸಿದ್ದಾರೆ.

ಇನ್ನು ಮತದಾನ ಮಾಡೋದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಜೆಡಿಎಸ್ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ವೋಟ್ ಎಲ್ಲಿದೆ? 45 ವೋಟ್ ಬೇಕಲ್ಲ ಎಲ್ಲಿದೆ? ಅವರಿಗೆ ಆತ್ಮಸಾಕ್ಷಿ ಅಂತ ಮತ ಇದೆಯಾ? ಅವರ ಮತಗಳೇ ನಮಗೆ ಬರುತ್ತಿದೆಯಲ್ಲ ಎಂದರು.

ಅವರಿಗೆ ಮತ ಇಲ್ಲದೆ ಹೋದರು ಕೂಡ ಅಭ್ಯರ್ಥಿ ಗೆಲುವಿಗಾಗಿ ನಮ್ಮ ಶಾಸಕರಿಗೆ ಆಮಿಷ ಒಡ್ಡಿ ಹೆದರಿಕೆ ಹಾಕಿದಕ್ಕೆ ಎಫ್ ಐ ಆರ್ ಹಾಕಲಾಗಿದೆ. ನಮ್ಮ ಅಭ್ಯರ್ಥಿಗಳು ಮೂರು ಜನ ಇದ್ದಾರಲ್ಲ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರೆ.

‘ಕೆ.ಸಿ ರೆಡ್ಡಿ’ ನೆನೆದ ಸಿಎಂ

ಸ್ವತಂತ್ರ ನಂತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಆಗಿದ್ದವರು ಕೆ ಸಿ ರೆಡ್ಡಿ. ಸ್ವತಂತ್ರ ನಂತರ ಅಷ್ಟೇ ಅಲ್ಲದೆ ಸ್ವತಂತ್ರ ಪೂರ್ವದಲ್ಲಿ ಕೂಡ ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದವರು. ಇವತ್ತು ಕರ್ನಾಟಕ ಆರ್ಥಿಕವಾಗಿ ಸಮಾಜಕವಾಗಿ ಬೆಳವಣಿಗೆ ಆಗಿದ್ದರೆ ಅವರ ಹಾಕಿರುವಂತಹ ಅಡಿಪಾಯವೇ ಕಾರಣ ಎಂದು ತಿಳಿಸಿದರು.