‘ರಾಜ್ಯ ಸರ್ಕಾರ’ದಿಂದ 4 ಬಾರಿ ಗ್ರಾಮ ಪಂಚಾಯ್ತಿ ‘ಸಾಮಾನ್ಯ ಸಭೆ’ಗೆ ಗೈರಾಗಿದ್ದ ‘ಸದಸ್ಯೆ ಅನರ್ಹ’ಗೊಳಿಸಿ ಆದೇಶ

Spread the love

ಕೊಡಗು: ಜಿಲ್ಲೆಯ ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ. ಪೊನ್ನಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯೆ ಪಿ.ಆರ್ ಮಂಜುಳಾ ಅವರು ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾಗಿದ್ದಾರೆ.

43ಎ ಅನ್ವಯ ಮತ್ತು ಅಧಿನಿಯಮ 12ಎಲ್ ಅನ್ವಯ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶಿಸಲಾಗಿದೆ.

ಅಂದಹಾಗೇ ಪಿ.ಆರ್ ಮಂಜುಳಾ ಅವರು ಪೊನ್ನಂಪೇಟೆ ಕಾಟರ್ ಕೊಲ್ಲಿ ವಿಭಾಗದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ನಂತ್ರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಇಂತಹ ಅವರು ಸತತ ನಾಲ್ಕು ಬಾರಿ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ ಗೈರಾಗಿದ್ದರು. ಈ ಹಿನ್ನಲೆಯಲ್ಲಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ.