ಡಿಸಿಎಂ DK ಶಿವಕುಮಾರ್‌ ಮನೆಯಿಂದಲೇ ʻಪೆನ್‌ ಡ್ರೈವ್‌ʼ ವರ್ಗಾವಣೆ ಆಗಿದೆ : ಮಾಜಿ ಸಿಎಂ ʻHDKʼ ಹೊಸ ಬಾಂಬ್‌

Spread the love

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲೇ ಪೆನ್ ಡ್ರೈವ್ ಟ್ರಾನ್ಸ್ ಫರ್ ನಡೆದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರಿಯಾದ ತನಿಖೆ ನಡೆಸದೇ ಇದ್ರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಪೆನ್‌ ಡ್ರೈವ್‌ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಕೈವಾಡ ಇದೆ. ಹಾಸನದ ಕಾಂಗ್ರೆಸ್ ಅಭ್ಯರ್ಥಿ ಹೊಳೆನರಸೀಪುರದಲ್ಲಿ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಡಿ.ಕೆ.ಸುರೇಶ್, ಡಿಕೆ ಶಿವಕುಮಾರ್ ಬಳಿ ಹೋಗಿದ್ದಾನೆ. ಈ ವೇಳೆಯೇ ಡಿ.ಕೆ. ಶಿವಕುಮಾರ್‌ ಮನೆಯಲ್ಲೇ ಪೆನ್‌ ಡ್ರೈವ್‌ ಟ್ರಾನ್ಸ್‌ ಫರ್‌ ನಡೆದಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.
ನಾನು ಪ್ರಜ್ವಲ್ ಪರವಾಗಿ ಇಲ್ಲ. ಆತನ ಅಪರಾಧ ಸಾಬೀತಾದರೆ ಶಿಕ್ಷೆ ಕೊಡಿ. ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ. ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಪೆನ್‌ ಡ್ರೈವ್‌ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಕೈವಾಡ ಇದೆ ಎಂದು ಹೇಳಿದ್ದಾರೆ.