ಮುಂಡಗೋಡ : ನಿರಂತರ ಮಳೆಯಿಂದ 34 ಶಾಲೆಗಳಿಗೆ ಹಾನಿ

Spread the love

ಮುಂಡಗೋಡ : ನಿರಂತರ ಮಳೆಯಿಂದಾಗಿ ಮುಂದಗೋಡ್ ತಾಲೂಕಿನ 34 ಶಾಲೆಗಳಿಗೆ ಹಾನಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಗಣಾಚಾರಿ ತಿಳಿಸಿದ್ದಾರೆ. 

ತಾಲೂಕಿನ 34 ಶಾಲೆಗಳಲ್ಲಿ ಸೋರುವಿಕೆ, ಚಿಕ್ಕ ಪುಟ್ಟ ಬಿರುಕು ಉಂಟಾಗಿದೆ ಮತ್ತು ಕರವಳ್ಳಿ ಶಾಲೆಯಲ್ಲಿ ಚಿಕ್ಕ ಗೋಡೆ ಬಿದ್ದಿದೆ ಎಂದು ಅವರು ತಿಳಿಸಿದರು. 

ತಾಲೂಕಿನ ಶಾಲಾ ಕೊಠಡಿಯ ಸುರಕ್ಷತೆ, ಶಿಕ್ಷಕರ ಸುರಕ್ಷತೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ತೀವ್ರ ಗಮನ ಹರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.