ಉಕ್ಕೇರಿದ ಗುಂಡಬಾಳ ನದಿ : ಗ್ರಾಮಗಳು ಜಲಾವೃತ..!

Spread the love

ಹೊನ್ನಾವರ : ತಾಲೂಕಿನಾದ್ಯಂತ ತಡರಾತ್ರಿಯಿಂದ ನಿರಂತರ ಮಳೆ ಸುರಿದ ಪರಿಣಾಮ ಗುಂಡಬಾಳ ನದಿಯಂಚಿನ ಗುಂಡಿಬೈಲು ಗ್ರಾಮ ಪ್ರವಾಹದ ಸಮಸ್ಯೆ ಎದುರಿಸಿದೆ.
ಘಟ್ಟದ ಮೇಲಿನ ಸಿದ್ದಾಪುರ ಭಾಗದಲ್ಲಿಯೂ ಮಳೆ ಸುರಿಯುತ್ತಿರುವ ಜತೆಗೆ ಹೊನ್ನಾವರ ಭಾಗದಲ್ಲಿ ಮಳೆ ಬೀಳುತ್ತಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಗುಂಡಿಬೈಲು ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ತೋಟ, ಗದ್ದೆಗಳು ಜಲಾವೃತಗೊಂಡಿವೆ. ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
ಗೇರುಸೊಪ್ಪ ಜಲಾಶಯದಿಂದ ಗುರುವಾರ ಬೆಳಿಗ್ಗೆ ನೀರು ಹೊರಬಿಡಲಾಗಿದ್ದು, ಶರಾವತಿ ನದಿಯಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದೆ.