ಮುಂಡಗೋಡ : ಜಿಲ್ಲಾಡಳಿತ ಉತ್ತರ ಕನ್ನಡ, ತಾಲೂಕ ಆಡಳಿತ ಮುಂಡಗೋಡ, ತಾಲೂಕಾ ಪಂಚಾಯತ್ ಮುಂಡಗೋಡ, ಪಟ್ಟಣ ಪಂಚಾಯತ ಮುಂಡಗೋಡ ಮತ್ತು ತಾಲೂಕಿನ ಎಲ್ಲಾ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಾಳೆ ದಿ.13 ರಂದು ಬೆಳಿಗ್ಗೆ 11 ಗಂಟೆಗೆ ಮುಂಡಗೋಡದ ಪ್ರವಾಸಿ ಮಂದಿರದಿಂದ ಬೈಕ್ ರ‍್ಯಾಲಿ ನಡೆಯಲಿದೆ ಎಂದು ತಹಶೀಲದಾರ ಶಂಕರ ಗೌಡಿ ತಿಳಿಸಿದ್ದಾರೆ.