ಸುಸ್ಥಿರ ಕೃಷಿಯನ್ನಾಗಿ ರೂಪಾಂತರ, ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನ…..

Spread the love

ಮುಂಡಗೋಡ : ತಾಲೂಕಿನಲ್ಲಿ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರ ಗೊಳಿಸುವುದು ಹಾಗೂ ಸಮರ್ಪಕ ಮಳೆ ನೀರಿನ ಸಂಗ್ರಹಣೆ ಮಾಡಿ ಉಪಯುಕ್ತ ಬಳಕೆ ಪದ್ದತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸಿ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 2024-25 ನೇ ಸಾಲಿನಲ್ಲಿ ಪುನಃ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ ನಿರ್ದೇಶನವಿರುತ್ತದೆ. ತಾಲೂಕಿಗೆ ಕೃಷಿ ಭಾಗ್ಯ ಯೋಜನೆಯಡಿ 51 ಸಾಮಾನ್ಯ, 9 ಪ,ಜಾ ಹಾಗೂ 2 ಪ.ಪಂಗಡ ಮತ್ತು ಕೃಷಿ ಭಾಗ್ಯ ಯೋಜನೆಯಡಿ 60 ಸಾಮಾನ್ಯ, 15 ಪ.ಜಾ ಹಾಗೂ 4 ಪ.ಪಂಗಡ, ಒಟ್ಟಾರೆಯಾಗಿ 141 ಫಲಾನುಭವಿಗಳ ಗುರಿಯನ್ನು ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ತಿಳಿಸಿದ್ದಾರೆ. 

ಯೋಜನೆಯಡಿಯಲ್ಲಿ ಸಹಾಯಧನದಡಿ ನೀಡಲಾಗುವ ಘಟಕಗಳು :
1) ಕ್ಷೇತ್ರ ಬದು ನಿರ್ಮಾಣ (ಸಹಾಯಧನ 80% ಸಾಮಾನ್ಯ, 90% . &,)
2) ನೀರು ಸಂಗ್ರಹಣಾ ರಚನೆ (ಕೃಷಿಹೊಂಡ) (ಸಹಾಯಧನ 80% ಸಾಮಾನ್ಯ, 90% ಪ.ಜಾ &,)
3) ನೀರು ಇಂಗದಂತೆ ತಡೆಯಲು ಪಾಲಿಥಿನ ಹೊದಿಕೆ (ಸಹಾಯಧನ 80% ಸಾಮಾನ್ಯ, 90% ಪ.ಜಾ &&.)
4) ಕೃಷಿಹೊಂಡದ ಸುತ್ತಲು ತಂತಿಬೇಲಿ (ಸಹಾಯಧನ – 40% ಸಾಮಾನ್ಯ, 50% ಪ,ಜಾ &ಪ.ಪಂ)
5) ಹೊಂಡದಿಂದ ನೀರುಎತ್ತಲು ಡಿಸೇಲ/ಪೆಟ್ರೋಲ/ಸೋಲಾರ ಪಂಪಸೇಟ್ (ಸಹಾಯಧನ – 80%
ಸಾಮಾನ್ಯ, 90% ಪ.ಜಾ &ಪ,ಪಂ)
6) ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ(ತುಂತುರು/ಹನಿ) ನೀರಾವರಿ ಘಟಕ (ಸಹಾಯಧನ 90% ಸಾಮಾನ್ಯ, ಪ,ಜಾ &ಪ,ಪಂ).  

ಕೃಷಿಭಾಗ್ಯ ಯೋಜನೆಯ ಅನುಷ್ಠಾನದ ಮುಖ್ಯಾಂಶಗಳು:
1) ತಾಲೂಕಿಗೆ ನಿಗಧಿತ ಗುರಿಗಿಂತ ಹೆಚ್ಚು ಅರ್ಜಿಗಳು ಸ್ವಿಕೃತವಾದಲ್ಲಿ ಲಾಟರಿ ಮುಖಾಂತರ ಪಲಾನುಭವಿಗಳ ಆಯ್ಕೆ ಮಾಡಲಾಗುವುದು.
2) ಜೇಷ್ಠತೆ ಆಧಾರದ ಮೇಲೆ ಕೆ-ಕಿಸಾನ ತಂತ್ರಾಂಶದಲ್ಲಿ ನೊಂದಣಿಯಾಗಿ ಆಯ್ಕೆಯಾದ ಅರ್ಹ ಅರ್ಜಿಗಳ ಜೇಷ್ಟತೆ ಆಧಾರದ ಮೇಲೆ ಅನುಷ್ಠಾನಗೊಳಿಸುವುದು. ಕಾರ್ಯಾ ದೇಶ ನೀಡಿದ 15-30 ದಿನಗಳೊಳಗಾಗಿ ಕೃಷಿ ಹೊಂಡ ನಿರ್ಮಿಸದೇ ಇರುವ ಫಲಾನುಭವಿಗಳ ಅರ್ಜಿ ಗಳನ್ನು ಸ್ಥಗಿತಗೊಳಸಿ ಇತರೆ ಫಲಾನುಭವಿಗಳ ಅರ್ಜಿಗಳನ್ನು ಪರಿಗಣಿಸಲು ಕೆ-ಕಿಸಾನ ತಂತ್ರಾಂಶ ದಲ್ಲಿ ಅವಕಾಶ ಕಲ್ಪಿಸಲಾಗಿದೆ.
3) ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೇ ನಂಬರನಲ್ಲಿ ಕನಿಷ್ಟ 1 ಎಕರೆ ಇರಬೇಕು.
4) ಹಿಂದಿನ ಸಾಲುಗಳಲ್ಲಿ ಕೃಷಿಭಾಗ್ಯ ಯೋಜನೆ ಅಥವಾ ಇನ್ನಾವುದೆ ಯೋಜನೆಯಡಿ ಕೃಷಿಹೊಂಡ ಫಲಾನುಭವಿಯಾಗಿರುವ ರೈತರು ಸದರಿ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮುಂಡಗೋಡ/ಪಾಳಾ (ಫೋನ್: 8277933066) ಅಥವಾ ಆತ್ಮಾ ಯೋಜನೆಯ ಸಿಬ್ಬಂದಿಗಳಾದ ದೀಪಾ ಶೆಟ್ಟರ್ ( 8277680807). ಈರಣ್ಣ ಯಕ್ಕುಂಡಿ (8152928253) ಸಂಪರ್ಕಿಸಲು ಕೋರಲಾಗಿದೆ.