ಹೊನ್ನಾವರ: ಅವೈಜ್ಞಾಜಿಕ ಕಸ್ತೂರಿರಂಗನ್ ವರದಿಯ ಕುರಿತು ಸರಕಾರಕ್ಕೆ ಗಾಂಭೀರ್ಯತೆ ಅರಿವಿದೆ. ಸರಕಾರದ ನಿಲುವು ಜನಪರವಾಗಿರುವದು ಅಲ್ಲದೇ, ಕರಡು ಕಸ್ತೂರಿರಂಗನ್ ವರದಿ ವಿರೋದಕ್ಕೆ ಸರ್ಕಾರ ಬಧ್ದವಾಗಿದೆ ಎಂದು ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಹೇಳಿದರು.
ಸೆ.೧೯ ರಂದು ಕಸ್ತೂರಿರಂಗನ್ ವರದಿ ಕುರಿತು, ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ ಹಾಗೂ ಸೆ.೨೫ ರಂದು ರಾಜ್ಯ ಸರಕಾರ ವರದಿಯ ಕುರಿತು ನಿಲುವು ಪ್ರಕಟಿಸುವದರಿಂದ, ಅರಣ್ಯವಾಸಿಗಳ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಇಂದು ಸಚಿವರ ಹೊನ್ನಾವರ ತಾಲೂಕಿನ ಕಛೇರಿಯಲ್ಲಿ ನಿಯೋಗ ಭೇಟಿಯಾಗಿ ಮನವಿ ನೀಡಿದ ಸಂದರ್ಭದಲ್ಲಿ ಮೇಲಿನಂತೆ ಹೇಳಿದರು.
ಕಸ್ತೂರಿರಂಗನ್ ವರದಿ ಸಚಿವ ಸಂಪುಟ ಉಪಸಮಿತಿ ಸದ್ಯಸರು ಆಗಿರುವ ಸಚಿವರು, ವರದಿ ತಿರಸ್ಕರಿಸಲು ತೀವ್ರ ಒತ್ತಡ ರಾಜ್ಯಾದಂತ ಇದ್ದು, ವರದಿ ತಿರಸ್ಕರಿಸಲು ಒತ್ತಡ ತರಲಾಗುವದು ಎಂದು ಅವರು ನಿಯೋಗಕ್ಕೆ ಭರವಸೆ ನೀಡಿದರು.
ಉತ್ತರ ಕನ್ನಡದಲ್ಲಿ ವರದಿಯಿಂದ ಜನರ ಮೂಲಭೂತ ಸೌಕರ್ಯ ಮತ್ತು ಅರಣ್ಯವಾಸಿಗಳ ಹಕ್ಕಿಗೆ ಆತಂಕ ಉಂಟಾಗುವದು ಎಂದು ಅವರು ತಿಳಿಸಿದರು.
ಚರ್ಚೆಯಲ್ಲಿ ಪ್ರಧಾನ ಸಂಚಾಲಕ ಜೆ.ಎಮ್.ಶೆಟ್ಟಿ, ಮಾತನಾಡಿ ವರದಿ ಜಾರಿಯಿಂದ ಜನರ ಸ್ವಾತಂತ್ರ ಜೀವನಕ್ಕೆ ಭಾದಕ ಉಂಟಾಗುವದು ಎಂದು ಅವರು ಹೇಳಿದರು.
ನಿಯೋಗದಲ್ಲಿ ಪಧಾದಿಕಾರಿಗಳಾದ ದೇವರಾಜ್ ಗೊಂಡ, ಬಾಲಚಂದ್ರ ಶೆಟ್ಟಿ ಅಚವೆ, ಮಹಾಬಲೇಶ್ವರ್ ನಾಯ್ಕ ಬೇಡ್ಕಣಿ, ಸಂಕೇತ ಹೊನ್ನಾವರ, ದಿನೇಶ ನಾಯ್ಕ ಸಿದ್ದಾಪುರ, ವಿನೋದ ನಾಯ್ಕ ಎಲ್ಕೋಟಗಿ, ಚಂದು ಬೆಳಕೆ, ಸುರೇಶ ಕರ್ನಾಕೊಲ್, ಆಯೂಬ್ ಉಮ್ಮರ್ ಬೆಟ್ಕುಳಿ, ಜಿ.ಕೆ.ಗೌಡ ಮುಂತಾದವರು ಉಪಸ್ಥಿತರಿದ್ದರು.
ಅವೈಜ್ಞಾನಿಕ ವರದಿ :
ಕಸ್ತೂರಿರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಮೂಲಕ ತಯಾರಿಸಿದ ವರದಿಯು ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವೈತಿರಿಕ್ತವಾಗಿದೆ. ಅಲ್ಲದೇ ಗ್ರಾಮದ ಶೇ. ೨೦ ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವಿವೈವಿಧ್ಯ ಪರಿಸರ ಸೂಕ್ಷ್ಮ ವಾಗಿರುವ ಮಾನದಂಡದ ಅಡಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸುವುದು ಅವೈಜ್ಞಾನಿಕ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಚರ್ಚೆಯ ಸಂದರ್ಭದಲ್ಲಿ ಹೇಳಿದರು.