ರಾಜ್ಯದಲ್ಲಿ ಶೇ.90 ರಷ್ಟು ಮುಸ್ಲಿಂರೇ ‘ವಕ್ಫ್‌’ ಬೋರ್ಡ್‌ ಆಸ್ತಿ ಒತ್ತುವರಿ ಮಾಡಿದ್ದಾರೆ : ಸಚಿವ ಜಮೀರ್ ಅಹ್ಮದ್

Spread the love

ವಿಜಯಪುರ : ವಕ್ಫ್ ವಿವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ವಕ್ಫ್ ಮಂಡಳಿ ಸಭೆ ನಡೆಸಿ ಸಭೆಯಲ್ಲಿ ಇದುವರೆಗೂ ರೈತರಿಗೆ ನೀಡಿದ್ದ ನೋಟಿಸ್ ಗಳನ್ನು ಕೂಡಲೇ ಹಿಂಪಡೆಯಿರಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದಲ್ಲಿ ಶೇಕಡ 90ರಷ್ಟು ಮುಸ್ಲಿಂರೆ ವಕ್ಫ್‌ ಬೋರ್ಡ್‌ ಆಸ್ತಿ ಒತ್ತುವರಿ ಮಾಡಿದ್ದಾರೆ ಎಂದು ತಿಳಿಸಿದರು.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲು ಹೇಳಿದ್ದೇವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟವಾದ ಆದೇಶ ನೀಡಿದ್ದಾರೆ. ರೈತರ ಜಮೀನನ್ನ ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿಲ್ಲ. ಅವರು ನಮ್ಮ ಅನ್ನದಾತರು. ಅವರ ಜಮೀನು ತೆಗೆದುಕೊಳ್ಳೊಕೆ ಅಗುತ್ತಾ? ಎಂದರು.

ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ ಜಮೀನು ಒತ್ತುವರಿಯಾಗಿದೆ. 90 ಪ್ರತಿಶತ ಮುಸ್ಲಿಂರೇ ವಕ್ಫ್‌ ಬೋರ್ಡ್‌ ಆಸ್ತಿ ಒತ್ತುವರಿ ಮಾಡಿದ್ದಾರೆ. ಪಾಪ ಹಿಂದೂಗಳು ಕೇವಲ 10 ಪರ್ಸೆಂಟ್ ಮಾಡಿರಬಹುದು. ಯಾರನ್ನೂ ಒಕ್ಕಲೆಬ್ಬಿಸೊ ಉದ್ದೇಶವಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯವರು ಸುಮ್ಮನೆ ನಂಗೆ ಪ್ರಚಾರ ನೀಡುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪುಕ್ಕಟ್ಟೆ ಪ್ರಚಾರ ಮಾಡ್ತಿದ್ದಾರೆ. ಹಿಂದೆ ಬೊಮ್ಮಾಯಿ ವಕ್ಫ್‌ ಸಭೆ ಮಾಡಿಲ್ವಾ? ಅವರೇ ಇದೆಲ್ಲಾ ಅಲ್ಲಾನಾ ಆಸ್ತಿ ಎಂದಿದ್ದಾರೆ. ಇವಾಗ ಉಲ್ಟಾ ಹೊಡೆಯುತ್ತಿದ್ದಾರೆ ಏನು ಮಾಡೋಣ? ಎಂದು ಹೇಳಿದ್ದಾರೆ.