ಮುಂಡಗೋಡ : ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ಹಾಗೂ ವಕ್ಫ ಅಕ್ರಮವನ್ನು ವಿರೋಧಿಸಿ ಸೋಮವಾರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ವಿರುದ್ಧ ಪ್ರತಿಭಟನೆಕಾರರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಎಂ.ಎಲ್.ಸಿ. ಶಾಂತಾರಾಮ, ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ, ತಾಲೂಕಾ ಬಿಜೆಪಿ ಅಧ್ಯಕ್ಷರಾದ ಮಂಜುನಾಥ ಪಾಟೀಲ, ಅಶೋಕ ಚಲವಾದಿ, ಮಹೇಶ ಹೊಸಕೊಪ್ಪ, ಪ್ರಕಾಶ ಬಡಿಗೇರ, ಬಸವರಾಜ ಟಣಕೆದಾರ, ಡಿ.ಎಫ್.ಮಡ್ಲಿ, ನಿಂಗಜ್ಜ ಕೋಣನಕೇರಿ, ಸಂತೋಷ ತಳವಾರ, ಶ್ರೀಕಾಂತ ಸಾನು, ಲೈಜಾ ಥಾಮಸ್, ವಿಠ್ಠಲ ಬಾಳಂಬೀಡ, ಭರತರಾಜ ಹದಳಗಿ, ಗುರು ಕಾಮತ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.