ಚಿಕ್ಕಬಳ್ಳಾಪುರ: ಮಿನಿ ವಿಧಾನಸೌಧ ವಕ್ಫ್ ಆಸ್ತಿ ಎಂಬುದಾಗಿ ನಮೂದಿಸಿದ ವಿವಾದದ ಬೆನ್ನಲ್ಲೇ ಸರ್ ಎಂ ವಿಶ್ವೇಶ್ವರಯ್ಯ ಅವರು ಓದಿದಂತ ಸರ್ಕಾರಿ ಶಾಲೆಯ ಭೂಮಿ ಕೂಡ ವಕ್ಫ್ ಗೆ ಸೇರಿದ್ದು ಎಂಬುದಾಗಿ ಪಹಣಿಯಲ್ಲಿ ನಮೂದಿಸಲಾಗಿದೆ. ಇದರ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಂದವಾರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ಹೋದಿದ್ದು. ಈ ಸರ್ಕಾರಿ ಶಾಲೆಯ ಹೆಸರಿನಲ್ಲಿದ್ದಂತ ಸರ್ವೆ ನಂಬರ್ 1ರಲ್ಲಿನ 19 ಗುಂಟೆ ಜಾಗ ಕೂಡ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್ ಸ್ವತ್ತು ಎಂಬುದಾಗಿ ಪಹಣಿಯಲ್ಲಿ ಉಲ್ಲೇಖಿಸಲಾಗಿದೆ.
2015-16ರಲ್ಲಿ ಪಹಣಿಯಲ್ಲಿ ಸ್ಕೂಲ್ ಬದಲು ವಕ್ಫ್ ಸ್ವತ್ತು ಎಂಬುದಾಗಿ ನಮೂದಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಯ ಜಾಗದ ಉಳಿವಿಗಾಗಿ ಕಂದವಾರ ಗ್ರಾಮದ ಗ್ರಾಮಸ್ಥರು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಅಲ್ಲದೇ ಈ ತಪ್ಪು ಸರಿಪಡಿಸುವಂತೆಯೂ ಆಗ್ರಹಿಸಿದ್ದಾರೆ.
ಇನ್ನೂ ಕೆಲ ವರ್ಷಗಳ ಹಿಂದೆ ಶಾಲೆಯ ಆವರಣದಲ್ಲೇ ದರ್ಗಾ ಕೂಡ ತೆಲೆ ಎತ್ತಿದ್ದೂ, ಗ್ರಾಮಸ್ಥರು ಸರ್ಕಾರಿ ಶಾಲೆ ಉಳಿವಿಗಾಗಿ ಕಾನೂನು ಹೋರಾಟದ ಮೊರೆ ಹೋಗಿದ್ದಾರೆ.