Mundgod : The fire station constructed at a cost of around 3 crore rupees in the premises of APMC here is waiting for inauguration.
At the time of the fire disaster, Sirsi or Hanagal taluk should have been informed and a fire engine should have been called. By the time this vehicle arrived, the fire had spread and more disaster was happening. Therefore, as the demand for a separate fire station increased, a separate fire station was started for the taluk in 2013.
In 2020, a tube well was drilled in APMC premises and a temporary shed was constructed.
MLA Hebbar’s effort: When MLA Shivram Hebbara became a minister, to provide a permanent solution to the fire station in the APMC premises.
He had obtained a land on lease in an empty space and provided a grant to construct a building at a cost of about 3 crore rupees. Well equipped fire station building is already completed and ready for inauguration.
ಉದ್ಘಾಟನೆಗಾಗಿ ಕಾದಿರುವ ಮುಂಡಗೋಡ ಅಗ್ನಿಶಾಮಕ ಠಾಣೆ
ಮುಂಡಗೋಡ : ಇಲ್ಲಿಯ ಎಪಿಎಂಸಿಯ ಆವರಣದಲ್ಲಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಅಗ್ನಿಶಾಮಕ ಠಾಣೆ ಉದ್ಘಾಟನೆಗಾಗಿ ಕಾಯುತ್ತಿದೆ.
ಅಗ್ನಿ ಅನಾಹುತವಾದ ಸಮಯದಲ್ಲಿ ಶಿರಸಿ ಇಲ್ಲವೇ ಹಾನಗಲ್ ತಾಲೂಕಿಗೆ ಮಾಹಿತಿ ನೀಡಿ ಅಗ್ನಿಶಾಮಕ ವಾಹನ ಕರೆಸಬೇಕಾಗಿತ್ತು. ಈ ವಾಹನ ಬರುವಷ್ಟರಲ್ಲಿ ಬೆಂಕಿ ವ್ಯಾಪಿಸಿ ಹೆಚ್ಚು ಅನಾಹುತ ಸಂಭವಿಸುತ್ತಿತ್ತು. ಹೀಗಾಗಿ ಪ್ರತ್ಯೇಕ ಅಗ್ನಿಶಾಮಕ ಠಾಣೆಬೇಕೆಂಬ ಬೇಡಿಕೆ ಹೆಚ್ಚಾಗಿದ್ದರಿಂದ 2013ರಲ್ಲಿ ತಾಲೂಕಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆಯ ಆರಂಭಿಸಲಾಗಿತ್ತು. ಆದರೆ ಸ್ವಂತ ಕಟ್ಟಡ ಇಲ್ಲದೆ ಇಲ್ಲಿಯ ಪಂಚಾಯತ್ ರಾಜ್ ಇಲಾಖೆಯ ಕಚೇರಿಯ ಆವರಣದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ನಿರ್ಮಿಸಿ, ಅಗ್ನಿಶಾಮಕ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.
2020ರಲ್ಲಿ ಎಪಿಎಂಸಿ ಆವರಣದಲ್ಲಿ ಕೊಳವೆ ಬಾವಿ ಕೊರೆದು ತಾತ್ಕಾಲಿಕ ಶೆಡ್ ನಿರ್ಮಿಸಲಾಗಿತ್ತು.
ಶಾಸಕರ ಪ್ರಯತ್ನ : ಶಾಸಕರಾದ ಶಿವರಾಮ ಕಾರೂರು ಸಚಿವರಾದ ವೇಳೆಯಲ್ಲಿ ಅಗ್ನಿಶಾಮಕ ಠಾಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಪಿಎಂಸಿ ಆವರಣದಲ್ಲಿ
ಖುಲ್ಲಾ ಜಾಗದಲ್ಲಿ ಲೀಜ್ ಮೂಲಕ ಜಾಗ ಪಡೆದು ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಅನುದಾನ ನೀಡಿದ್ದರು. ಈಗಾಗಲೇ ಸುಸಜ್ಜಿತವಾದ ಅಗ್ನಿಶಾಮಕ ಠಾಣೆ ಕಟ್ಟಡ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಈ ಹೊಸ ಕಟ್ಟಡದಲ್ಲಿ ಮೂರು ಅಗ್ನಿಶಾಮಕ ವಾಹನ ನಿಲ್ಲುವ ವ್ಯವಸ್ಥೆ ಕಲ್ಪಿಸಲಾಗಿದೆ.