ಬಳ್ಳಾರಿ: ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಾಳೆ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮನೆ ಮನೆ ಪ್ರಚಾರಕ್ಕೆ ಮಾತ್ರವೇ ಅವಕಾಶವಿದೆ. ಈ ವೇಳೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಮಾತ್ರ ತಾನು ಚುನಾವಣಾ ಪ್ರಚಾರಕ್ಕೂ ಜೈ, ಬೋಂಡಾ ಮಾಡೋದಕ್ಕೂ ಸೈ ಎಂಬುದಾಗಿ ಹೋಟೆಲ್ ಒಂದರಲ್ಲಿ ಮಿರ್ಚಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ವೀಡಿಯೋ ಸಹಿತ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಹೊನ್ನಾಳಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು, ಸಂಡೂರು ತಾಲೂಕಿನ ಕಳಸಿಗೆರೆ ಗ್ರಾಮದಲ್ಲಿ ನೆನ್ನೆ ಮತಯಾಚನೆ ಸಂದರ್ಭದಲ್ಲಿ ನಾಗೇಂದ್ರ ಗೌಡ ಅವರ ಹೋಟೆಲ್ ನಲ್ಲಿ ಅವರ ಅಪೇಕ್ಷೆ ಮೇರೆಗೆ ಮಿರ್ಚಿ ಮಾಡಿದ ಸಂದರ್ಭ ಎಂದಿದ್ದಾರೆ.