ಮುಂಡಗೋಡದ ಗ್ರಾಮ ಲೆಕ್ಕಿಗನಿಗೆ ನ್ಯಾಯಾಂಗ ಬಂಧನ..!

Spread the love

ಮುಂಡಗೋಡ : 2019 ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಮುಂಡಗೋಡದ ಕಂದಾಯ ಇಲಾಖೆಯಲ್ಲಿ ಸದ್ಯ ಇಂದೂರು ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಿರೀಶ ರಣದೇವ ಎಂಬಾತನ ಮೇಲಿನ ಪ್ರಕರಣ ನ್ಯಾಯಾಲಯದಲ್ಲಿ ದೃಢಪಟ್ಟಿದ್ದರಿಂದ, ಲೋಕಾಯುಕ್ತಪೊಲೀಸರು ಈತನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನವೆಂಬರ್ 21ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

2019ರಲ್ಲಿ ಹಳಿಯಾಳದ ಕಂದಾಯ ಇಲಾಖೆಯ ತತ್ವಣಗಿಯಲ್ಲಿ ಗಿರೀಶ ರಣದೇವ ಗ್ರಾಮಲೆಕ್ಕಿಗನಾಗಿದ್ದ. ಅದೇ ಗ್ರಾಮದ ಭೀಮರಾವ ಕುರುಬರ ಎಂಬುವರು ತನ್ನ ತಂದೆ ಮರಣ ಹೊಂದಿದ ನಂತರ 17 ಎಕರೆ ಜಮೀನನ್ನು ತನ್ನ ಹಾಗೂ ಸಹೋದರನಿಗೆ ಭಾಗವಾಗಿ ಸಬ್‌ರಿಜಿಸ್ಟರ್‌ನಲ್ಲಿ ನೋಂದಾವಣೆ ಮಾಡಿಕೊಂಡಿದ್ದ. ನಂತರ ಹಳಿಯಾಳ ತಹಶೀಲ್ದಾರ ಕಚೇರಿಗೆ ಖಾತೆ ಬದಲಾವಣೆಗೆ ಭೀಮರಾವ ಹಾಕಿದ್ದ ಅರ್ಜಿಯು ಗ್ರಾಮಲೆಕ್ಕಿಗ ಗಿರೀಶ ರಣದೇವ ಎನ್ನುವವರ ಬಂದಿತ್ತು. ಇದಕ್ಕೆ ಗ್ರಾಮಲೆಕ್ಕಿಗ ಗಿರೀಶ 3,000 ರೂಪಾಯಿ ಲಂಚ ಕೇಳಿದ್ದ. ಆ ವೇಳೆಯಲ್ಲಿ ಭೀಮರಾವ ಲೋಕಾಯುಕ್ತರಲ್ಲಿ ದೂರು ನೀಡಿದ್ದರು. ಗ್ರಾಮಲೆಕ್ಕಿಗ ಗಿರೀಶ ಹಣ ಪಡೆಯುತ್ತಿರುವಾಗ ಲೋಕಾಯುಕ್ತರು ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದ.ರಣದೇವ ಕಳೆದ ನಾಲೈದು ವರ್ಷಗಳಿಂದ ಲೋಕಾಯುಕ್ತ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿತ್ತು. ನವಂಬರ್ 15ರಂದು ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಪ್ರಕಟವಾಗಿದ್ದು, ಗ್ರಾಮಲೆಕ್ಕಿಗ ಗಿರೀಶ ರಣದೇವ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಶಿಕ್ಷೆಯ ಪ್ರಮಾಣ ನವೆಂಬರ್ 21ರಂದು ಪ್ರಕಟವಾಗುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಗ್ರಾಮಲೆಕ್ಕಿಗ ಗಿರೀಶ ರಣದೇವ ಅವರನ್ನು ವಶಕ್ಕೆ ಪಡೆದಿದ್ದಾರೆ.