ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಾಣದ ಬಳಿ ರವಿವಾರ ಬೆಳಗ್ಗೆ 11.59ಕ್ಕೆ ಭೂ ಕಂಪನವಾಗಿದೆ. ಭೂಮಿಯ 5ಕಿಮೀ ಆಳದಲ್ಲಿ ಕಂಪನವಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟಿನಲ್ಲಿ ಭೂ ಕಂಪನದ ಬಗ್ಗೆ ದಾಖಲಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಭೂ ಕಂಪನ ಆಗಿರುವುದನ್ನು ಅಲ್ಲಗಳೆದಿದೆ..!
ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಕುಮಟಾ ತಾಲೂಕಿನ ಕೆಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ ಆದ ಬಗ್ಗೆ ಜನ ಸಾಕಷ್ಟು ಪ್ರಮಾಣದಲ್ಲಿ ಚರ್ಚಿಸಿದ್ದರು. ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದವರು ಭೂಕಂಪನದ ಮಾತನ್ನು ಅಲ್ಲಗಳೆದಿದ್ದರು. ಉತ್ತರ ಕನ್ನಡ ಜಿಲ್ಲಾಡಳಿತ ಸಹ ಭೂಮಿ ಕಂಪಿಸಿಲ್ಲ ಎಂದು ಪ್ರಕಟಣೆ ಹೊರಡಿಸಿತ್ತು. ಆದರೆ, ಸೋಮವಾರ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟಿನಲ್ಲಿ ಯಾಣದ ಬಳಿ ಭೂ ಕಂಪನ ಆದ ಬಗ್ಗೆ ದಾಖಲಿಸಲಾಗಿದೆ.