ಮುಂಡಗೋಡ : ಮುಂಡಗೋಡ ತಾಲೂಕಾ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿವರ್ಷದಂತೆ ಈ ವರ್ಷವೂ 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ನಾಗರಾಜ ನಾಯ್ಕ ತಿಳಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳಿಂದ ಮಾರ್ಕ್ಸ್ ಕಾರ್ಡ್ (ಅಂಕಪಟ್ಟಿ)ಗಳನ್ನು ಮತ್ತು ಆಧಾರ್ ಕಾರ್ಡ್ ಫೋಟೋಗಳನ್ನು ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ (9880300482), ಖಜಾಂಚಿ ಉದಯ ನಾಯ್ಕ(9482625850), ಸಹ ಕಾರ್ಯದರ್ಶಿ ಗಜಾನನ ನಾಯ್ಕ ಮಳಗಿ (9482189756), ಸಾಂಸ್ಕೃತಿಕ ಕಾರ್ಯದರ್ಶಿ ಶಿವಕುಮಾರ ನಾಯ್ಕ ಬೆಕ್ಕೋಡ(9480380241) ಇವರಿಗೆ ಕಳಿಸಲು ಕೋರಲಾಗಿದೆ.
ವಿದ್ಯಾರ್ಥಿಗಳು ಮುಂಡಗೋಡ ತಾಲೂಕಿನವರಾಗಿರಬೇಕು. ಅವರ ಪಾಲಕರು ಇದೇ ತಾಲೂಕಿನಲ್ಲಿ ವಾಸ ಮಾಡುವವರಾಗಿರಬೇಕು. 2024ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಜರುಗಿದ ವಾರ್ಷಿಕ SSLC ಮತ್ತು PUC ದ್ವಿತೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. SSLCಯಲ್ಲಿ ಶೇ.85ರಷ್ಟು ಅಂಕಗಳಿಸಿರಬೇಕು. PUC ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಗಳಿಸಿರಬೇಕು. ತಮ್ಮ ಅಂಕಪಟ್ಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ವಾಟ್ಸಪ್ ಮೂಲಕ ಫೋಟೋಗಳನ್ನು ಡಿಸೆಂಬರ್ 20ರೊಳಗೆ ಕಳಿಸಬೇಕು. ಸಮಾಜದ ನೌಕರರ ವರ್ಗದ ಮಕ್ಕಳೂ ಪ್ರತಿಭಾ ಪುರಸ್ಕಾರಕ್ಕೆಅರ್ಹರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9480022076 ಮೊಬೈಲ್ ಅನ್ನು ಸಂಪರ್ಕಿಸಬೇಕು ಎಂದು ತಾಲೂಕಾ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಾಗರಾಜ ನಾಯ್ಕ ತಿಳಿಸಿದ್ದಾರೆ.