ಬೆಡಸಗಾಂವ ಸೊಸೈಟಿ ಚುನಾವಣೆ : ಉತ್ಸಾಹದಿಂದ ಮತ ಚಲಾಯಿಸುತ್ತಿರುವ ಮತದಾರರು..!

Spread the love

ವರದಿ : ದೇವೇಂದ್ರ ನಾಯ್ಕ, ಬೆಡಸಗಾಂವ
ಮುಂಡಗೋಡ : ಬೆಡಸಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ 12 ಸ್ಥಾನಗಳ ನಿರ್ದೇಶಕರ ಆಯ್ಕೆಗೆ ಇಂದು ಬೆಳಗ್ಗೆ 9 ಗಂಟೆಯಿಂದ ಮತದಾನ ಆರಂಭಗೊಂಡಿದೆ. 

ಮತದಾನ ಶಾಂತಿಯುತವಾಗಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ದೂರದ ಹಳ್ಳಿಗಳಿಂದಲೂ ಮತದಾರರು ಬಂದು ಮತ ಚಲಾಯಿಸುತ್ತಿರುವುದು ಕಂಡುಬಂತು. ವಯೋವೃದ್ದ ಮತದಾರರು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. 

ಉತ್ತಮ ಆಡಳಿತ ಕಮಿಟಿ ರಚನೆಯಾಗಬೇಕೆಂಬುದೇ ಎಲ್ಲರ ಹಾಗೂ ಮತದಾರರ ಬಯಕೆಯಾಗಿದೆ. ಸಾಯಂಕಾಲ 4ಗಂಟೆವರೆಗೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ರಾಘವೇಂದ್ರ ಗುಡಿಕೇರಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.