ವರದಿ : ದೇವೇಂದ್ರ ನಾಯ್ಕ, ಬೆಡಸಗಾಂವ
ಮುಂಡಗೋಡ : ತಾಲೂಕಿನ ಬೆಡಸಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ 12 ಸ್ಥಾನಗಳ ನಿರ್ದೇಶಕರ ಆಯ್ಕೆಗೆ ನಡೆದ ಮತದಾನ ಇಂದು ಮುಗಿದಿದೆ. ಚುನಾವಣೆಯ ಮತ ಎಣಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗ ಧಾರವಾಡ ಹೈಕೋರ್ಟ್ ಪೀಠ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ತಡೆಯಾಜ್ಞೆ ನೀಡಿದೆ.
ಮತದಾನದ ಅನರ್ಹತೆಯಾದಿಯಲ್ಲಿನ ರೈತರು ಹಾಗೂ ಸಂಘದ ಸದಸ್ಯರು ಒಟ್ಟು 14 ಜನರು ನಮಗೆ ಮತದಾನದ ಹಕ್ಕು ಬೇಕು ಎಂದು ಧಾರವಾಡ ಹೈಕೋರ್ಟ ಮೆಟ್ಟಿಲೇರಿದ್ದರು.
ಹೀಗಾಗಿ ನ್ಯಾಯಾಲಯವೂ 14 ಜನರಿಗೆ ಮತದಾನದ ಅವಕಾಶ ನೀಡಬೇಕು ಹಾಗೂ ಮುಂದಿನ ಆದೇಶದ ವರೆಗೂ ಮತ ಎಣಿಕೆಯನ್ನು ಮಾಡಬಾರದು ಅಂತ ಆದೇಶ ನೀಡಿದೆ. ಇದರಿಂದಾಗಿ ಸಂಜೆ ನಾಲ್ಕು ಗಂಟೆಯ ನಂತರ ನಡೆಯಬೇಕಿದ್ದ ಮತ ಎಣಿಕೆ ಕಾರ್ಯ ತಡೆಯಾಗಿದೆ. ಈಗ ಬಿಗಿ ಭದ್ರತೆಯಲ್ಲಿ ಮತಪೆಟ್ಟಿಗೆಯನ್ನು ಇಡಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಪರಶುರಾಮ ಮಿರ್ಜಗಿ ಭೇಟಿ ನೀಡಿದ್ದರು.