ಚಿಕಿತ್ಸೆಗೆ ಸ್ಪಂದಿಸದೇ ಮಂಜುನಾಥ ಸಾವು

Spread the love

ಮುಂಡಗೋಡ : 14 ವರ್ಷಗಳಿಂದ ಎದೆನೋವಿನಿಂದ ಬಳಲುತ್ತಿದ್ದ ಮಂಜುನಾಥ ಗೆಜ್ಜೆಹಳ್ಳಿ ಅದೇ ನೋವಿನಲ್ಲಿ ಕೈ ಕೊರೆದುಕೊಂಡಿದ್ದು, ಚಿಕಿತ್ಸೆಗೆ ದಾಖಲಿಸಿದರೂ ಸ್ಪಂದಿಸದೇ ಸಾವನಪ್ಪಿದ್ದಾರೆ. 

ಮುಂಡಗೋಡಿನ ರಾಮಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಗೆಜ್ಜೆಹಳ್ಳಿ (34) ಎದೆನೋವಿನ ಕಾರಣ ಹಲವು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದರೆ, ಎಲ್ಲಿಯೂ ಅವರ ಸಮಸ್ಯೆ ಬಗೆಹರಿದಿರಲಿಲ್ಲ. ಜನವರಿ 14ರಂದು ಮತ್ತೆ ಎದೆನೋವು ಕಾಣಿಸಿಕೊಂಡಿದ್ದು, ಕೆಮ್ಮು-ಜ್ವರದಿಂದ ಅವರು ಬಳಲಿದರು.
ಅನಾರೋಗ್ಯದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿ ಅವರು ಬ್ಲೇಡಿನಿಂದ ಕೈ ಕೊರೆದುಕೊಂಡರು. ರಕ್ತದ ಮೊಡವಿನಲ್ಲಿ ಬಿದ್ದಿದ್ದ ಮಂಜುನಾಥ ಅವರನ್ನು ಕುಟುಂಬದವರು ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದೊಯ್ದರು. ತೀವೃ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಿದರು. ಆದರೆ, ಆ ಚಿಕಿತ್ಸೆಗೆ ಮಂಜುನಾಥ ಅವರು ಸ್ಪಂದಿಸಲಿಲ್ಲ. ಕಿಮ್ಸ್ ಆಸ್ಪತ್ರೆಯಲ್ಲಿ ಅವರು ಜನವರಿ 15ರಂದು ಸಾವನ್ನಪ್ಪಿದರು.