ಭೂಸುರಕ್ಷಾ ಯೋಜನೆಯನ್ನು ಉದ್ಘಾಟಿಸಿದ ಶಾಸಕ ಹೆಬ್ಬಾರ್

Spread the love

ಮುಂಡಗೋಡ : ಇಲ್ಲಿಯ ತಹಶೀಲದಾರ ಕಾರ್ಯಾಲಯದಲ್ಲಿ ಬುಧವಾರ ಶಾಸಕರಾದ ಶಿವರಾಮ ಹೆಬ್ಬಾರ ಅವರು ಭೂಸುರಕ್ಷಾ (ಭೂ ದಾಖಲೆಗಳ ಡಿಜಿಟಲೀಕರಣ) ಯೋಜನೆಯನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ.ಎಸ್.ಪಾಟೀಲ, ತಹಶೀಲದಾರ ಶಂಕರ ಗೌಡಿ, ಮುಖಂಡರಾದ ವಿವೇಕ ಹೆಬ್ಬಾರ, ಗ್ರೆಡ್2 ತಹಶೀಲದಾರ ಚಂದ್ರಶೇಖರ್ ಹೊಸಮನಿ, ಮುಖಂಡರಾದ ಎಚ್.ಎಂ.ನಾಯ್ಕ, ಕೃಷ್ಣ ಹಿರೇಹಳ್ಳಿ, ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ತಹಶೀಲದಾರ ಕಚೇರಿಯ ಸಿಬ್ಬಂದಿಗಳು ಇದ್ದರು.