ಮುಂಡಗೋಡ : ಮುಂಡಗೋಡ ಪಿ.ಎಲ್.ಡಿ. ಬ್ಯಾಂಕಿನ (ಮುಂಡಗೋಡ ತಾಲೂಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ) ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಬೀಳ್ಕೊಡುಗೆ ಸಮಾರಂಭ ಬುಧವಾರ ನಡೆಯಿತು.
ಬ್ಯಾಂಕಿನ ಅಧ್ಯಕ್ಷರಾದ ಕೆಂಜೋಡಿ ಗಲಬಿ, ಉಪಾಧ್ಯಕ್ಷರಾದ ಡಿ.ಎಫ್.ಮಡ್ಲಿ ಸೇರಿದಂತೆ ನಿರ್ದೇಶಕರು ಬ್ಯಾಂಕಿನ ಅಭಿವೃದ್ಧಿಗೆ ಸಿಬ್ಬಂದಿಗಳ ಸಹಕಾರವನ್ನು ಶ್ಲಾಘಿಸಿದರು. ಬ್ಯಾಂಕಿನ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಬಸಪ್ಪ ನಾಯ್ಕ, ನಾಗರಾಜ ಅಂಡಗಿ, ಕೆ.ಆರ್.ರಾಮಚಂದ್ರನ್, ತಿಮ್ಮಣ್ಣ ಗೊಟಗೋಡಿ, ಚಂದ್ರಶೇಖರ್ ಗಾಣಿಗೇರ, ರವಿರಾಜ ಕಲಘಟಗಿ, ಹುಸೇನಸಾಬ ಕಾವಲವಾಡ, ಭರಮಪ್ಪ ಧೂಪದ, ಬ್ಯಾಂಕಿನ ಮ್ಯಾನೇಜರ್ ಕಲ್ಯಾಣಕುಮಾರ್ ಚೌಶೆಟ್ಟಿ, ಕ್ಯಾಶಿಯರ್ ಜಿ.ಕೆ.ನಾಯ್ಕ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಹುಬ್ಬಳ್ಳಿ, ಸುಧೀರ ಪಾಯಣ್ಣವರ್, ವಿನಯ ಲಕ್ಷ್ಮೀಪುರ, ಸಂದೀಪ ರಾಯ್ಕರ ಇದ್ದರು.