ಟಿಪ್ಪರ್ ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಪಾದಚಾರಿ ಸಾವು

Spread the love

ಮುಂಡಗೋಡ : ಎಂ.ಸ್ಯಾಂಡ ತುಂಬಿದ ಟಿಪ್ಪರ ಲಾರಿಯೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಸಾಯಂಕಾಲ ಸಂಭವಿಸಿದೆ. 

ಈ ಅಪಘಾತದಲ್ಲಿ ಪಾದಚಾರಿಯ ದೇಹವೆಲ್ಲಾ ಛಿದ್ರಗೊಂಡಿದೆ. ಟಿಪ್ಪರ ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಪಾದಚಾರಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಮೃತ ಪಾದಚಾರಿ ಗುರುತು ಇನ್ನು ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.