ಇಂದು ವಿಶ್ವ ಸಿಂಹಗಳ ದಿನ, ಕಾಡಿನ ರಾಜನ ಬಗ್ಗೆ ಒಂದಿಷ್ಟು ಮಾಹಿತಿ…..

Spread the love

ಬೆಂಗಳೂರು : ಆಗಸ್ಟ್‌ 10ನ್ನು ವಿಶ್ವ ಸಿಂಹಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಕಾಡಿನ ರಾಜ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಮತ್ತು ಸಿಂಹ ಸಂತತಿಯನ್ನು ಕಾಪಾಡಿಕೊಂಡು ಹೋಗುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಸಿಂಹದ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ…..

  • ಈ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ 2013 ರಲ್ಲಿ ಆರಂಭಿಸಿದರು.
  • ಸಿಂಹಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕಲು ಇಷ್ಟ ಪಡುತ್ತವೆ. ಅಲ್ಲದೆ ತೋಳಗಳ ಜೀವನ ಮಾದರಿಯಲ್ಲಿ ಬದುಕುತ್ತವೆ
  • ಕಾಡಿನ ರಾಜನು ಹುಲ್ಲುಗಾವಲು-ಬಯಲು ಪ್ರದೇಶದಲ್ಲಿ ಮಾತ್ರ ವಾಸಿಸುತ್ತಾನೆ
  • ಗಂಡು ಸಿಂಹಗಳು 226 ಕೆಜಿಯವರೆಗೆ ತೂಗುತ್ತವೆ ಮತ್ತು ಎಂಟು ಅಡಿ ಉದ್ದದವರೆಗೆ ಬೆಳೆಯುತ್ತವೆ
  • ಗಂಡು ಸಿಂಹಗಳು ತಲೆ, ಕುತ್ತಿಗೆ ಮತ್ತು ಭುಜದ ಸುತ್ತಲೂ ಉದ್ದವಾದ ದಪ್ಪ ಕೂದಲುಗಳನ್ನು ಹೊಂದಿರುತ್ತವೆ. ಅಲ್ಲದೆ ನೋಡುತ್ತಲೆ ಭಯತರಿಸುವಂತೆ ಕಾಣುತ್ತವೆ.
  • ಹೆಣ್ಣು ಸಿಂಹಗಳು ಚಿಕ್ಕದಾಗಿರುತ್ತವೆ ಮತ್ತು ವೇಗವಾಗಿ ಭೇಟೆಯಾಡುತ್ತವೆ. ಅಲ್ಲದೆ ಜೊತೆಗಾತಿಯರ ಜೊತೆಯಲ್ಲೇ ಹೆಚ್ಚು ಕಾಲ ಕಳೆಯುತ್ತವೆ.
  • ಸಿಂಹಗಳು ಸಾಮಾನ್ಯವಾಗಿ ಕಾಡಿನಲ್ಲಿ ಗರಿಷ್ಠ 16 ವರ್ಷ ಮತ್ತು ಝೂನಲ್ಲಿ 25 ವರ್ಷ ಬದುಕುತ್ತದೆ.
  • ಈ ಪ್ರಾಣಿಗಳು ಹೆಚ್ಚಾಗಿ ರಾತ್ರಿ ವೇಳೆ ಬೇಟೆಯಾಡುತ್ತವೆ. ಕತ್ತಲೆಯಲ್ಲಿ ಈ ಪ್ರಾಣಿಗಳ ಕಣ್ಣುಗಳು ಭಾರೀ ಚುರುಕಿನಿಂದ ಕೆಲಸ ಮಾಡುತ್ತವೆ.
  • ವರದಿಗಳ ಪ್ರಕಾರ, ಒಂದು ಶತಮಾನದ ಹಿಂದೆ ಆಫ್ರಿಕಾದಲ್ಲಿ 2,00,000 ಕ್ಕೂ ಹೆಚ್ಚು ಕಾಡು ಸಿಂಹಗಳು ವಾಸಿಸುತ್ತಿದ್ದವು. ಇತ್ತೀಚಿನ ಸಮೀಕ್ಷೆಗಳು ಕಳೆದ ಎರಡು ದಶಕಗಳಲ್ಲಿ ಸಿಂಹಗಳ ಸಂಖ್ಯೆ ಅಂದಾಜು 30,000 ದಿಂದ ಸುಮಾರು 20,000 ಕ್ಕೆ ಇಳಿದಿದೆ.