ಚಾಂಪಿಯನ್‌ ಟ್ರೋಫಿ ಕ್ರಿಕೆಟ್: ಪಾಕಿಸ್ತಾನ ತಂಡದ ವಿರುದ್ಧ ಟೀಂ ಇಂಡಿಯಾ ಜಯ

Spread the love

ನವದೆಹಲಿ : ತೀವ್ರ ಕುತೂಹಲ ಮೂಡಿಸಿದ್ದ ಚಾಂಪಿಯನ್ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನ್ ತಂಡದ ವಿರುದ್ಧ ಸುಲಭ ಜಯ ಸಾಧಿಸಿತು. 

ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಲು ಹೋಗಿ ಬೇಗ ನಿರ್ಗಮಿಸಿದರು. ಅವರು 15 ಬಾಲ್‌ಗಳಿಗೆ 20 ರನ್ ಬಾರಿಸಿ ಗಮನ ಸೆಳೆದರು. ಹಾರ್ದಿಕ್ ಪಾಂಡ್ಯ 6 ಬಾಲ್‌ಗೆ 8 ರನ್ ಬಾರಿಸಿ ನಿರ್ಗಮಿಸಿದರು. 

ಅಕ್ಷ‌ರ್ ಪಟೇಲ್ 3 ರನ್‌ಗಳ ಕೊಡುಗೆ ನೀಡಿದರು. ಪಾಕ್ ಪರ ಶಾಹೀನ್ ಆಫ್ರಿಧಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು.
ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ, 49.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 241 ರನ್‌ಗಳಿಸಿ, ಭಾರತಕ್ಕೆ 242 ರನ್‌ಗಳ ಗೆಲುವಿನ ಗುರಿ ನೀಡಿತ್ತು.
ಪಾಕಿಸ್ತಾನದ ಸೌದ್ ಶಕೀಲ್ 62, ಮೊಹಮ್ಮದ್ ರಿಜ್ವಾನ್ 46, ಖುಪ್ಟಿಲ್ ಶಾ 38 ರನ್ ಗಳಿಸಿ ತಂಡಕ್ಕೆ ನೆರವಾದರು. ಉಳಿದಂತೆ ಯಾವ ಬ್ಯಾಟ‌ರ್ ಕೂಡ ಭಾರತೀಯ ಬೌಲರ್‌ಗಳ ಎದುರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲ್ಲಿಲ್ಲ.
ಪಾಕ್ ವಿರುದ್ಧ ಭಾರತದ ಬೌಲರ್‌ಗಳ ಉತ್ತಮ ದಾಳಿ ನಡೆಸಿದರು. ಕುಲದೀಪ್ ಯಾದವ್ 3, ಪಾಂಡ್ಯ 2, ಜಡೇಜ, ರಾಣ ಹಾಗೂ ಅಕ್ಷ‌ರ್ ತಲಾ ಒಂದು ವಿಕೆಟ್ ಪಡೆದರು.