
ಹಾವೇರಿ : ಜಿಲ್ಲೆಯ ಬಂಕಾಪುರ ಬಳಿ ಮುಂಡಗೋಡಿನ ವ್ಯಕ್ತಿ ಮೃತಪಟ್ಟಿದ್ದಾನೆ. ಬೈಕ್ ಪಕ್ಕದಲ್ಲಿಯೇ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ಸಾವು ಕಂಡಿದ್ದಾನೆ.

ಮುಂಡಗೋಡ ತಾಲೂಕಿನ ಮುಡಸಾಲಿಯ ಮಂಜುನಾಥ ಜಾಧವ್(45) ಅಲಿಯಾಸ್ ಮಂಜು ಮುಡಸಾಲಿ ಎಂಬುವವನೇ ಸಾವನ್ನಪ್ಪಿರೋ ವ್ಯಕ್ತಿ ಎಂದು ಅನುಮಾನಿಸಲಾಗಿದೆ.
KA 31 EF 3587 ಸಂಖ್ಯೆಯ ಪಲ್ಸರ್ ಬೈಕ್ ನ ಪಕ್ಕದಲ್ಲೇ ರಕ್ತಸಿಕ್ತವಾಗಿ ಬಿದ್ದಿರೋ ವ್ಯಕ್ತಿಯನ್ನು ಮಂಜುನಾಥ ಜಾಧವ್ ಎಂದು ಹೇಳಲಾಗುತ್ತಿದೆ. ಬಂಕಾಪುರ ಪಟ್ಟಣದ ಹೊರವಲಯದ ರಸ್ತೆ ಪಕ್ಕದಲ್ಲಿ ಈ ಘಟನೆ ನಡೆದಿದೆ.
ವ್ಯಕ್ತಿಯ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.