ದಿ.16ರಂದು ಕೂರ್ಲಿ ಗ್ರಾಮದಲ್ಲಿ ರಾಜ್ಯ ಮಟ್ಟದ ಭಾರೀ ದನ ಬೆದರಿಸುವ ಕಾರ್ಯಕ್ರಮ

Spread the love

ಮುಂಡಗೋಡ : ತಾಲೂಕಿನ ಕೂರ್ಲಿ ಗ್ರಾಮದಲ್ಲಿ ಶ್ರೀ ಶ್ರೀ ಶ್ರೀ ಕಬ್ಬರಗಿ ಭೂತೇಶ್ವರ ಕೃಪಾಶೀರ್ವಾದದೊಂದಿಗೆ  ದಿ.16 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ರಾಜ್ಯಮಟ್ಟದ ಭಾರೀ ದನ ಬೆದರಿಸುವ ಕಾರ್ಯಕ್ರಮ ನಡೆಯಲಿದೆ.  

ರಾಜ್ಯಮಟ್ಟದ ಭಾರೀ ದನ ಬೆದರಿಸುವ ಕಾರ್ಯಕ್ರಮಕ್ಕೆ  3ಸಾವಿರರೂ. ಪ್ರವೇಶ ಶುಲ್ಕವಿದೆ.
ಬಂಪರ್ ಬಹುಮಾನ ಬೈಕ್, ಪ್ರಥಮ ಬಹುಮಾನ ಫ್ರಿಜ್, ದ್ವಿತೀಯ ಬಹುಮಾನ ಗೋದ್ರೆಜ್, ಚತುರ್ಥ ಬಹುಮಾನ ಡ್ರೆಸಿಂಗ್ ಟೇಬಲ್, ಇನ್ನುಳಿದ ಬಹುಮಾನವಾಗಿ ಫ್ಯಾನ್ ನೀಡಲಾಗುವುದು. ಹೋರಿ ಹಿಡಿತಗಾರರಿಗೆ ಪ್ರಥಮ ಬಹುಮಾನ 10ಸಾವಿರರೂ., ದ್ವಿತೀಯ ಬಹುಮಾನ 8ಸಾವಿರರೂ.,ತೃತೀಯ ಬಹುಮಾನ 6ಸಾವಿರರೂ. ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.