ಇಂದು ಕ.ಸಾ.ಪ.ದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Spread the love

ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಇಂದು ದಿ.15ರಂದು ಸಾಯಂಕಾಲ 5ಗಂಟೆಗೆ ಕೆ.ಎಚ್.ಬಿ. ಕಾಲೋನಿಯ ಸಂಗಮೇಶ್ವರ ಸಭಾಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ಅನುಪಮಾ ಆದಾಪುರ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮುಂಡಗೋಡ ತಾಲೂಕಾ ಅಧ್ಯಕ್ಷರಾದ ಅಧ್ಯಕ್ಷತೆ ವಹಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾದ ಜ್ಯೋತಿ ಆಚಾರಿ, ಸ್ತ್ರೀ ಚೈತನ್ಯ ಕೋ- ಆಪರೇಟಿವ್ ಸೊಸೈಟಿ ವ್ಯವಸ್ಥಾಪಕರಾದ ಸುಮತಿ ಸಿ.ಜಿ., ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ನಂದಾ ಮಠಲ್ಲೆ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿ ವಸತಿ ನಿಲಯದ ನಿಲಯ ಪಾಲಕರಾದ ಶಿವಲೀಲಾ ಘಂಟಾಮಠ ಆಗಮಿಸಲಿದ್ದಾರೆ.
ಜಾನಪದ ಗಾಯಕರ ಸುಲೋಚನಮ್ಮ ರಾಮಣ್ಣನವರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಡಿ.ಮುಡೆಣ್ಣವರ್ ಹಾಗೂ ವಿನಾಯಕ ಶೇಟ, ಗೌರವ ಕೋಶಾಧ್ಯಕ್ಷರಾದ ನಾಗರಾಜ ಅರ್ಕಸಾಲಿ ತಿಳಿಸಿದ್ದಾರೆ.