
ಬೆಂಗಳೂರು: ಅಕ್ಟೋಬರ್ 30 ರಂದು ನಡೆಯುವ ಉಪಚುನಾವಣಾ ಕಣ ರಂಗೇರುತ್ತಿದ್ದು, ಎರಡು ಕ್ಷೇತ್ರಗಳಿಗೆ ಒಟ್ಟು 37 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಸಿಂದಗಿಯಿಂದ ಎಂಟು ಅಭ್ಯರ್ಥಿಗಳು 12 ನಾಮಪತ್ರಗಳನ್ನು ಸಲ್ಲಿಸಿದ್ದರೆ, ಹಾನಗಲ್ ನಲ್ಲಿ 29 ಅಭ್ಯರ್ಥಿಗಳಿಂದ 45 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಂದಗಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ 1.8 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿದ್ದಾರೆ ಇವುಗಳಲ್ಲಿ ರೂ. 92.32 ಲಕ್ಷ ಮೌಲ್ಯದ ಸ್ಥಿರಾಸ್ತಿಗಳು ಮತ್ತು ರೂ. 52.35 ಲಕ್ಷ ಮೌಲ್ಯದ ಚರಾಸ್ತಿಗಳು ಸೇರಿವೆ. ಅವರು 200 ಗ್ರಾಂ ಚಿನ್ನ ಮತ್ತು 25 ಲಕ್ಷ ಮೌಲ್ಯದ ನಾಲ್ಕು ವಜ್ರದ ಬಳೆಗಳನ್ನು ಹೊಂದಿದ್ದಾರೆ. ಆವರಿಗೆ 29 ಲಕ್ಷ ರೂಪಾಯಿ ಸಾಲವಿದೆ. ಪತ್ನಿ ಲಲಿತಾಬಾಯಿ 1.62 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.