Headlines

ಅಫ್ಗಾನಿಸ್ತಾನದಲ್ಲಿ ಮತ್ತೊಂದು ಬಾಂಬ್‌ ಸ್ಫೋಟ: ತಾಲಿಬಾನ್‌ ಕಮಾಂಡರ್‌ ಸಾವು

Spread the love

ಕಾಬೂಲ್‌: ಅಫ್ಗಾನಿಸ್ತಾನದ ಅಸದಾಬಾದ್‌ನಲ್ಲಿ ಗುರುವಾರ ಬಾಂಬ್‌ ದಾಳಿ ನಡೆದಿದೆ. ಘಟನೆಯಲ್ಲಿ ತಾಲಿಬಾನ್‌ ಕಮಾಂಡರ್‌ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ಕುಣಾರ್ ಪ್ರಾಂತ್ಯದ ರಾಜಧಾನಿಯಾದ ಅಸಾದಾಬಾದ್‌ನಲ್ಲಿ ತಾಲಿಬಾನ್ ಪೊಲೀಸ್ ಮುಖ್ಯಸ್ಥರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಗುರಿಯಾಗಿಸಿ ಬಾಂಬ್ ಸ್ಫೋಟಿಸಲಾಗಿದೆ. ಘಟನೆಯಲ್ಲಿ ಒಬ್ಬ ತಾಲಿಬಾನ್‌ ಕಮಾಂಡರ್‌ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಪೂರ್ವ ಅಘ್ಗಾನಿಸ್ತಾನದಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಉಗ್ರ ಸಂಘಟನೆಯು ಈ ಹಿಂದೆ ಇದೇ ರೀತಿಯ ದಾಳಿಗಳನ್ನು ನಡೆಸಿತ್ತು.