ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನ ಪಡೆಯುವ ಭಕ್ತರಿಗೆ ಗುಡ್ ನ್ಯೂಸ್

Spread the love

ಹಾಸನ: ಪ್ರಸಿದ್ಧ ಹಾಸನಾಂಬ ದೇವಿ ದರ್ಶನೋತ್ಸವಕ್ಕೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ದೇವಾಲಯದ ಅಲಂಕಾರ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಬಹುತೇಕ ಪೂರ್ಣಗೊಂಡಿದೆ. ಸಾರ್ವಜನಿಕರಿಗೆ ಅ.29 ರಿಂದ ನ.5 ರ ವರೆಗೆ ಪ್ರತಿ ದಿನ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯ ವರೆಗೆ (ಮ.1 ರಿಂದ 3 ಗಂಟೆಗೆ) ನೈವೇದ್ಯ ಸಮರ್ಪಣೆ ಹೊರತು ಪಡಿಸಿ ದರ್ಶನಕ್ಕೆ ಅವಕಾಶವಿದೆ. ಆದರೆ ಕಡ್ಡಾಯವಾಗಿ ಕನಿಷ್ಠ 1 ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಈ ಬಗ್ಗೆ ಮುದ್ರಿತ ಅಥವಾ ಡಿಜಿಟಲ್ ದಾಖಲೆಯನ್ನು ಪ್ರದರ್ಶಿಸಬೇಕು ಎಂದು ಹೇಳಲಾಗಿದೆ.

ಸಾರ್ವಜನಿಕರು ಲಸಿಕೆ ಪಡೆದಿರುವ ಬಗ್ಗೆ 15 ಕಡೆ ತಪಾಸಣಾ ತಂಡ ನಿಯೋಜಿಸಲಾಗಿದೆ. ಅವರೆಲ್ಲರೂ ಭಕ್ತಾದಿಗಳೊಂದಿಗೆ ಸಂಯಮದಿಂದ ವರ್ತಿಸಿ ಮಾಹಿತಿ ಪಡೆದು ಪರಿಶೀಲನೆ ನಡೆಸಬೇಕು. ಎಲ್ಲಾ ಇಲಾಖಾ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ತಿಳಿಸಿದ್ದಾರೆ.

ಈ ವರ್ಷವೂ ವಿಶೇಷ ದರ್ಶನದ ಅವಕಾಶಗಳು ಇರಲಿವೆ 1000 ರೂ ಹಾಗೂ 300ರೂ ಗಳ ಪಾಸುಗಳನ್ನು ವಿತರಿಸಲಾಗುವುದು ಹಾಗೂ ಸಾಮಾನ್ಯ ದರ್ಶನಕ್ಕೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಲು ಅವಕಾಶ ನೀಡಲಾಗುವುದು. ಶಿಷ್ಟಾಚಾರ ಅತಿಥಿಗಣ್ಯರ ದರ್ಶನ ವ್ಯವಸ್ಥೆಗಳಿಗೆ ಅಧಿಕಾರಿಗಳ ತಂಡ ನಿಯೋಜಿಸಲಾಗಿದ್ದು, ಅವರು ಯಾವುದೇ ಕರ್ತವ್ಯ ಲೋಪವಿಲ್ಲದಂತೆ ಕಾರ್ಯ ನಿರ್ವಹಿಸಬೇಕು. ಅಲ್ಲದೇ ದೇವಾಲಯದ ಬಗ್ಗೆ ಪ್ರತಿದಿನ ಪುಷ್ಪಾಲಂಕಾರ ಬದಲಾಯಿಸುವಂತೆ ಅವರು ಸೂಚಿಸಿದರು.