ಡಿ.ಕೆ. ಶಿವಕುಮಾರ್ ಸಂಬಂಧಿ, ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮನಿಗೆ ಟಿಕೆಟ್​; ವಿಧಾನ ಪರಿಷತ್ ಚುನಾವಣೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Spread the love

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಪ್ರಪ್ರಥಮವಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮೊನ್ನೆಮೊನ್ನೆಯಷ್ಟೇ ಬಿಡುಗಡೆ ಮಾಡಿದ್ದು, ಇದೀಗ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸಂಬಂಧಿ ಎಸ್​. ರವಿ ಹಾಗೂ ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಚನ್ನರಾಜ ಬಸವರಾಜ ಹಟ್ಟಿಹೊಳಿ ಸೇರಿ 20 ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅನುಮೋದಿಸಿದ್ದು, ಪಕ್ಷ ಆ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಾಜಿ ಸಚಿವ ಎ. ಮಂಜು ಪುತ್ರ ಡಾ. ಮಂಥರ್ ಗೌಡಗೂ ಟಿಕೆಟ್ ಸಿಕ್ಕಿದೆ.

ಕಾಂಗ್ರೆಸ್ ಎಂಎಲ್​ಸಿ ಅಭ್ಯರ್ಥಿಗಳ ವಿವರ

  1. ಕಲಬುರಗಿ: ಶಿವಾನಂದ ಪಾಟೀಲ ಮರ್ತೂರು
  2. ಬೆಳಗಾವಿ: ಚನ್ನರಾಜ ಬಸವರಾಜ ಹಟ್ಟಿಹೊಳಿ
  3. ಉತ್ತರಕನ್ನಡ: ಭೀಮಣ್ಣ ನಾಯ್ಕ್​
  4. ಹುಬ್ಬಳ್ಳಿ-ಧಾರವಾಡ-ಗದಗ-ಹಾವೇರಿ: ಸಲೀಂ ಅಹಮದ್
  5. ರಾಯಚೂರು: ಶರಣ ಗೌಡ ಅನ್ನದಾನ ಗೌಡ ಪಾಟೀಲ
  6. ಚಿತ್ರದುರ್ಗ: ಬಿ. ಸೋಮಶೇಖರ್
  7. ಶಿವಮೊಗ್ಗ: ಆರ್. ಪ್ರಸನ್ನಕುಮಾರ್​
  8. ದಕ್ಷಿಣಕನ್ನಡ: ಮಂಜುನಾಥ ಭಂಡಾರಿ
  9. ಚಿಕ್ಕಮಗಳೂರು: ಎ.ವಿ. ಗಾಯತ್ರಿ ಶಾಂತೇಗೌಡ
  10. ಹಾಸನ: ಎಂ. ಶಂಕರ್
  11. ತುಮಕೂರು: ಆರ್. ರಾಜೇಂದ್ರ
  12. ಮಂಡ್ಯ: ಎಂ.ಜಿ. ಗೂಳಿಗೌಡ (ದಿನೇಶ್ ಗೂಳಿಗೌಡ)
  13. ಬೆಂಗಳೂರು ಗ್ರಾಮಾಂತರ: ಎಸ್. ರವಿ
  14. ಕೊಡಗು: ಡಾ.ಮಂಥರ್ ಗೌಡ
  15. ವಿಜಯಪುರ-ಬಾಗಲಕೋಟೆ: ಸುನೀಲ್ ಗೌಡ ಪಾಟೀಲ
  16. ಮೈಸೂರು-ಚಾಮರಾಜನಗರ: ಡಾ.ಡಿ. ತಮ್ಮಯ್ಯ
  17. ಬಳ್ಳಾರಿ: ಕೆ.ಸಿ. ಕೊಂಡಯ್ಯ
  18. ಬೀದರ್: ಭೀಮರಾವ್ ಬಿ. ಪಾಟೀಲ
  19. ಕೋಲಾರ: ಎಂ.ಎಲ್. ಅನಿಲ್​ಕುಮಾರ್
  20. ಬೆಂಗಳೂರು ನಗರ: ಯೂಸುಫ್ ಷರೀಫ್​