ವಸತಿ ಶಾಲೆಗಳನ್ನು “ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ” ಎಂದು ಮರು ನಾಮಕರಣ : ರಾಜ್ಯ ಸರ್ಕಾರ ಆದೇಶ

Spread the love

ಬೆಂಗಳೂರು : ಕನಾ೯ಟಕ ರಾಜ್ಯಪಾಲರ ಆದೇಶಾನುಸಾರ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾಯ೯ ನಿವ೯ಹಿಸುತ್ತಿರುವ ವಸತಿ ಶಾಲೆಗಳನ್ನು ‘ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ’ (Dr. B.R. Ambedkar Residential School)ಎಂದು ಮರು ನಾಮಕರಣ ಮಾಡಲು ಸಕಾ೯ರ ಆದೇಶಿಸಿದೆ.

ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಜಾತಿ ಮಕ್ಕಳಿಗೆ ಪ್ರಾಥಮಿಕ ಹಂತದ 1 ರಿಂದ 5 ನೇ ತರಗತಿವರೆಗಿನ ಶಿಕ್ಷಣವನ್ನು ನೀಡಲು ರಾಜ್ಯಾದ್ಯಂತ 68 ವಸತಿ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ. ಪ್ರತಿ ತರಗತಿಗೆ 25 ವಿದ್ಯಾರ್ಥಿಗಳಂತೆ 5 ನೇ ತರಗತಿಗಳಿಗೆ 125 ವಿದ್ಯಾರ್ಥಿಗಳು, ಒಟ್ಟು 68 ವಸತಿ ಶಾಲೆಗಳಿಗೆ 8,500 ವಿದ್ಯಾರ್ಥಿಗಳ ಸಂಖ್ಯೆ ಮಂಜೂರಾಗಿದ್ದು, ವಸತಿ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ಬೋಜನ, ಸಮವಸ್ತ್ರ ಸೇರಿ ಹಲವು ಸವಲತ್ತುಗಳನ್ನು ನೀಡಲಾಗುತ್ತಿದೆ.

ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಪ್ರಥಮ ಕಾನೂನು ಸಚಿವರಾಗಿದ್ದು, ಭಾರತದ ಸಶಕ್ತ ಸಂವಿಧಾನ ನೀಡಿದ ಶಿಲ್ಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಸಲಾಗುತ್ತಿರುವ ವಸತಿ ಶಾಲೆಗಳನ್ನು ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಂದು ಪುನರ್ ನಾಮಕರಣ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.