ಚಾಮರಾಜನಗರ : ಧಮ್ ಇದ್ದರೆ ಶಾಲೆಗಳಿಗೆ ಹಿಜಾಬ್ ಧರಿಸಿಕೊಂಡು ಬರಲು ಕೇಳುತ್ತಿರುವ ಹೆಣ್ಣು ಮಕ್ಕಳನ್ನು ಮಸೀದಿ ಗಳಿಗೆ ಕರೆದುಕೊಂಡು ಹೋಗಲಿ ನೋಡೋಣ ಎಂದು ಗ್ರಾಮೀಣಾಭಿವೃದ್ಧಿ ಹಾಗೂಪಂಚಾಯತ್ ಇಲಾಖೆ ಸಚಿವಕೆ.ಎಸ್.ಈಶ್ವರಪ್ಪ ಸವಾಲ್ ಹಾಕಿದರು.
ಹಿಜಾಬ್ ಧರಿಸಿ ವಿಧಾನಸಭೆಗೆ ಬರುತ್ತೇನೆ, ಧಮ್ ಇದ್ದರೆ ತಡೆಯಲಿ ಎಂಬ ಕಲಬುರಗಿ ಶಾಸಕಿ ಕನೀಜ್ ಫಾತೀಮಾ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು ಪ್ರಪಂಚದಲ್ಲಿ ಎಲ್ಲಿಗೆ ಬೇಕಾದ್ರು ಹಿಜಾಬ್ ಧರಿಸಿ ಹೋಗಬಹುದು. ಆದರೆ ಶಾಲೆಗಳಲ್ಲಿ ಬೇಡ ಎಂಬುದೇ ನಮ್ಮ ಉದ್ದೇಶ. ಆ ಶಾಸಕಿ ಧಮ್ ಇದ್ದರೆ ತಡೆಯಿರಿ ಎಂದು ಹೇಳ್ತಾರೆ, ಇಲ್ಲಿ ಧಮ್ ಪ್ರಶ್ನೆ ಬರೋಲ್ಲ. ಅಷ್ಟೆಲ್ಲಾ ಮಾತನಾಡ್ತೀರಲ್ಲ ಧಮ್ ಇದ್ದರೆ ಶಾಲೆಗಳಿಗೆ ಹಿಜಾಬ್ ಧರಿಸಿಕೊಂಡು ಬರಲು ಕೇಳುತ್ತಿರುವ ಹೆಣ್ಣು ಮಕ್ಕಳನ್ನು ಮಸೀದಿ ಗಳಿಗೆ ಕರೆದುಕೊಂಡು ಹೋಗಲಿ ನೋಡೋಣ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸವಾಲ್ ಹಾಕಿದರು.
ಹಿಜಾಬ್ ಗಲಾಟೆಗೆ ಕಾಂಗ್ರೆಸ್ಸೇ ಕಾರಣ , ಆ ಮೂಲಕ ಮುಸಲ್ಮಾನರ ಓಟ್ ಪಡೆಯುವ ಯತ್ನ ಮಾಡುತ್ತಿದೆ , ಮಕ್ಕಳಲ್ಲೂ ಮತಾಂಧತೆ ತುಂಬುವ ಕುತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ.ಇದನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ ಕಾಂಗ್ರೆಸ್ ರಾಜ್ಯದಲ್ಲಿ ಗೊಂದಲ ನಿರ್ಮಾಣ ಮಾಡಿ ರಾಜಕೀಯ ಲಾಭ ಪಡೆಯಲು ಹೊರಟಿದೆ ಎಂದರು.