
ಬೆಂಗಳೂರು : ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 9-12ನೇ ತರಗತಿಗಳಿಗೆ ನಾಳೆಯಿಂದ 3 ದಿನ ರಜೆ ಘೋಷಿಸಲಾಗಿದೆ. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿ.ಸಿ ನಾಗೇಶ್ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 9-12ನೇ ತರಗತಿಗಳಿಗೆ ನಾಳೆಯಿಂದ 3 ದಿನ ರಜೆ ಘೋಷಿಸಲಾಗಿದೆ.
ಎಲ್ಲರೂ ಶಾಂತಿ ಕಾಪಾಡಲು ಕೋರಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ತರಗತಿಗಳಲ್ಲಿ ‘ಸಮವಸ್ತ್ರ ನಿಯಮ ಪಾಲಿಸಬೇಕು’ ಎಂಬ ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಈ ಕುರಿತು ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.