ಬಾಲಕಿ ಮನೆಬಿಟ್ಟು ಬಂದಿರುವುದು ಜನರಿಗೆ ಶಾಕ್ ನೀಡಿತ್ತು….!
ಮುಂಡಗೋಡ : ಗ್ರಾಮೀಣ ಭಾಗದ ಬಾಲಕಿಯೊಬ್ಬಳು ಮನೆಬಿಟ್ಟು ಮುಂಡಗೋಡಿಗೆ ಬಂದು ತನಗೊಂದು ಬಾಡಿಗೆ ಮನೆ ಕೊಡಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡ ಘಟನೆ ಇಂದು ನಡೆದಿದೆ. ಗ್ರಾಮೀಣ ಭಾಗದ ಅಪ್ರಾಪ್ತ ಬಾಲಕಿಯೊಬ್ಬಳು ತನಗೆ ಮನೆಯಲ್ಲಿ ಹೊಡೆಯುತ್ತಾರೆ, ಬಡಿಯುತ್ತಾರೆಂದು ಬ್ಯಾಗ್‍ಗಳಲ್ಲಿ ಬಟ್ಟೆಯನ್ನು ತುಂಬಿಕೊಂಡು ಪಟ್ಟಣದ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ಕುಳಿತಿದ್ದಳು. ಸೊಸೈಟಿ ಸಿಬ್ಬಂದಿಗಳಿಗೆ ಮನೆಯಲ್ಲಿ ತೊಂದರೆ ಕೊಡುತ್ತಿರುವುದರಿಂದ ಮನೆ ಬಿಟ್ಟು ಬಂದಿದ್ಧೇನೆ. ನನಗೆ ಬಾಡಿಗೆ ಮನೆ ಕೊಡಿಸಿ ಪ್ರತ್ಯೇಕವಾಗಿ ಜೀವನ ನಡೆಸುತ್ತೇನೆ ಎಂದು ಹೇಳಿದಳೆಂದು ತಿಳಿದುಬಂದಿದೆ. …