Raj Newsline

Raj News Line

Raj News Line is Digital Daily News Paper Publishing from Mundgod (Uttar Kannada Dist.). Providing Mundgod Local News, Karnataka News & Updates including Politics, Crime, Education, Events and All about Mundgod Latest News today in Karnataka. Publisher and Editor : Rajshekhar N.Naik Email : rajshekarnaik2008@gmail.com       rajnewsline007@gmail.com Mobile : 9880111140, 6360567736

Read More

ಕಬ್ಬಿನ ಹೊಲಕ್ಕೆ ಹಾಕಿದ್ದ ವಿದ್ಯುತ್ ತಂತಿ ತಾಗಿ ವ್ಯಕ್ತಿ ಸಾವು

ಮುಂಡಗೋಡ : ಕಬ್ಬಿನ ಹೊಲಕ್ಕೆ ಅಳವಡಿಸಿದ ವಿದ್ಯುತ್ ತಂತಿ ತಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆಯೊಂದು ತಾಲೂಕಿನ ಉಗ್ಗಿನಕೇರಿಯಲ್ಲಿ ಕಳೆದ ರಾತ್ರಿ ನಡೆದಿದೆ. ತಾಲೂಕಿನ ಉಗ್ಗಿನಕೇರಿ ಗ್ರಾಮದ ಪ್ರದೀಪ ಜೂಜೆ ಸಿದ್ದಿ(34) ಎಂಬಾತನೇ ವಿದ್ಯುತ್ ತಂತಿ ತಾಗಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಪರಶುರಾಮ ಪುರದವರ್ ಇವರು ತಮ್ಮ ಕಬ್ಬಿನ ಹೊಲದ ಬೇಲಿಗೆ ವಿದ್ಯುತ್ ಹರಿಸಿದ್ದಲ್ಲಿ ಪ್ರಾಣಿಗಳು ಹಾಗೂ ಮನುಷ್ಯರು ಬೇಲಿಯನ್ನು ಮುಟ್ಟಿದರೆ ಪ್ರಾಣಾಪಾಯ ಆಗುತ್ತದೆ ಎನ್ನುವ ಬಗ್ಗೆ ತಿಳಿದಿದ್ದರೂ ಸಹ ನಿರ್ಲಕ್ಷ್ಯತನದಿಂದ ತಮ್ಮ ಕಬ್ಬಿನ ಹೊಲಕ್ಕೆ ಅಳವಡಿಸಿದ ತಂತಿಗೆ ಬೋರಿನ…

Read More

ಪದ್ಮಾಂಬಾ ಪುಟ್ಟಣ್ಣ ವಿಧಿವಶ

ಮುಂಡಗೋಡ : ತಾಲೂಕಿನಲ್ಲಿ ಪದ್ಮಾಂಬಾ ಪುಟ್ಟಣ್ಣ ಎಂದೇ ಖ್ಯಾತಿ ಪಡೆದಿದ್ದ ವೃಷಭರಾಜ ಅಂಗಡಿ(54) ವಿಧಿವಶರಾಗಿದ್ದಾರೆ.      ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಪುಟ್ಟಣ್ಣ, ಹುಬ್ಬಳ್ಳಿ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.      ಮುಂಡಗೋಡಿನ ಪದ್ಮಾಂಬಾ ಬುಕ್ ಸ್ಟಾಲ್ ಮಾಲೀಕರಾಗಿದ್ದ ಪುಟ್ಟಣ್ಣ ಅವರು, ತಾಲೂಕಿನ ಬಿ.ಜೆ.ಪಿ. ಸಕ್ರಿಯ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರರನ್ನು ಬಿಟ್ಟು ಅಗಲಿದ್ದಾರೆ. ಇವರ ನಿಧನಕ್ಕೆ ವರ್ತಕರ ಸಂಘದವರು, ಗಣ್ಯರು, ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಕೇಂದ್ರ, ರಾಜ್ಯ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ ಪ್ರತಿಭಟನೆ

ಮುಂಡಗೋಡ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಲಾಯಿತು.     ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.     ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುತ್ತಿದೆ. ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.     ನಂತರ ಕಾಂಗ್ರೆಸ್ ಮುಖಂಡ…

Read More

ಅರಶಿಣಗೇರಿಯಲ್ಲಿ ರೈತನ ಆತ್ಮಹತ್ಯೆ

ಮುಂಡಗೋಡ : ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಶನಿವಾರ ರೈತನೊಬ್ಬ ಮನನೊಂದು ಅರಣ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರಶಣಗೇರಿ ಗ್ರಾಮದ ದೇವೇಂದ್ರಪ್ಪ ತೆಗ್ಗಳ್ಳಿ(60) ಮೃತಪಟ್ಟ ರೈತನಾಗಿದ್ದಾನೆ. ಜಮೀನಿನಲ್ಲಿ ಈ ಬಾರಿ ಶೇಂಗಾ ಬೆಳೆಯನ್ನು ಬೆಳೆಯಲು ವಿವಿಧ ಸಂಘ-ಸಂಸ್ಥೆ ಹಾಗೂ ಸೊಸೈಟಿಗಳಲ್ಲಿ ಸಾಲ ಮಾಡಿದ್ದ. ಆದರೆ ಶೇಂಗಾ ಬೆಳೆ ತೆಗೆಯುವ ವೇಳೆ ಮಳೆ ಬಂದು ಬೆಳೆ ಹಾಳಾಗಿತ್ತು. ಬೆಳೆ ಸರಿಯಾಗಿ ಸಿಗದಿದ್ದರಿಂದ ಬೇಸರದಲ್ಲಿದ್ದ ಈತನು ಮನನೊಂದು ಅರಶೀಣಗೇರಿ ವ್ಯಾಪ್ತಿಯ ಅರಣ್ಯದಲ್ಲಿರುವ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.  ಈ…

Read More

ತೆರಾಹಿ ಟ್ರಸ್ಟನಿಂದ ಕಾರ್ಮಿಕರಿಗೆ ಉಚಿತ ಊಟ

ಮುಂಡಗೋಡ : ತೆರಾಹಿ ಸಹರಾ ಫೌಂಡೇಶನ ಟ್ರಸ್ಟ ವತಿಯಿಂದ ಶನಿವಾರ ಕಾರ್ಮಿಕರಿಗೆ, ರೋಗಿಗಳಿಗೆ ಉಚಿತವಾಗಿ ಊಟ ನೀಡಲಾಯಿತು. ಈ ಸಂದರ್ಭದಲ್ಲಿ ತೆರಾಹಿ ಫೌಂಡೇಶನ ಅಧ್ಯಕ್ಷೆ ಸಲ್ಮಾ ಶೆರಖಾನೆ, ರೆಹನಾ ದಾವಣಗೇರಿ, ಮುಸ್ತಾನ ದರ್ಗಾವಾಲೆ, ಬಿಬಿಕತೂನ ದರ್ಗಾವಾಲೆ, ವೀರಭದ್ರ ಶೇರಖಾನೆ ಮುಂತಾದವರಿದ್ದರು.

Read More

ಬಾಲಕಿ ಮನೆಬಿಟ್ಟು ಬಂದಿರುವುದು ಜನರಿಗೆ ಶಾಕ್ ನೀಡಿತ್ತು….!

ಮುಂಡಗೋಡ : ಗ್ರಾಮೀಣ ಭಾಗದ ಬಾಲಕಿಯೊಬ್ಬಳು ಮನೆಬಿಟ್ಟು ಮುಂಡಗೋಡಿಗೆ ಬಂದು ತನಗೊಂದು ಬಾಡಿಗೆ ಮನೆ ಕೊಡಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡ ಘಟನೆ ಇಂದು ನಡೆದಿದೆ.     ಗ್ರಾಮೀಣ ಭಾಗದ ಅಪ್ರಾಪ್ತ ಬಾಲಕಿಯೊಬ್ಬಳು ತನಗೆ ಮನೆಯಲ್ಲಿ ಹೊಡೆಯುತ್ತಾರೆ, ಬಡಿಯುತ್ತಾರೆಂದು ಬ್ಯಾಗ್‍ಗಳಲ್ಲಿ ಬಟ್ಟೆಯನ್ನು ತುಂಬಿಕೊಂಡು ಪಟ್ಟಣದ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ಕುಳಿತಿದ್ದಳು. ಸೊಸೈಟಿ ಸಿಬ್ಬಂದಿಗಳಿಗೆ ಮನೆಯಲ್ಲಿ ತೊಂದರೆ ಕೊಡುತ್ತಿರುವುದರಿಂದ ಮನೆ ಬಿಟ್ಟು ಬಂದಿದ್ಧೇನೆ. ನನಗೆ ಬಾಡಿಗೆ ಮನೆ ಕೊಡಿಸಿ ಪ್ರತ್ಯೇಕವಾಗಿ ಜೀವನ ನಡೆಸುತ್ತೇನೆ ಎಂದು ಹೇಳಿದಳೆಂದು ತಿಳಿದುಬಂದಿದೆ.   …

Read More

ಚವಡಳ್ಳಿ ಗ್ರಾಮದಲ್ಲಿ ಸರಾಯಿ ಪಾಕೀಟು ಸುಟ್ಟು ಹಾಕಿ ಜನ ಜಾಗೃತಿ ಮೂಡಿಸಿದ ಯುವಕರು, ಗ್ರಾಮಸ್ಥರು….!

ಮುಂಡಗೋಡ : ಸರಾಯಿ ವಿರುದ್ಧ ಜನಜಾಗೃತಿ ಗ್ರಾಮೀಣ ಭಾಗದಲ್ಲಿ ನಿಧಾನವಾಗಿ ಆಗುತ್ತಿದೆ. ಮೊನ್ನೆಯಷ್ಟೇ ತಾಲೂಕಿನ ಕಾಳಗನಕೊಪ್ಪ ಗ್ರಾಮದಲ್ಲಿ ಮಹಿಳೆಯರು ಸಿಡಿದೆದ್ದು ಗ್ರಾಮದಲ್ಲಿ ಸರಾಯಿ ಮಾರುವುದನ್ನು ಬಂದ್ ಮಾಡಿಸಿದ್ದರು.ಈ ಘಟನೆಯಿಂದ ಪ್ರೇರಿತರಾಗಿ ಚೌಡಳ್ಳಿಯಲ್ಲಿ ಗುರುವಾರ ರಾತ್ರಿ ಗ್ರಾಮಸ್ಥರು ಹಾಗೂ ಯುವಕರು ಒಂದಾಗಿ ಇನ್ನು ಮುಂದೆ ಸರಾಯಿ ಯಾರೂ ಮಾರಾಟ ಮಾಡಬಾರದೆಂದು ಅಂಗಡಿಕಾರರಿಗೆ ಮನವಿ ಮಾಡಿದರು. ಇದಕ್ಕೆ ಅಂಗಡಿಕಾರರು ಸ್ಪಂದಿಸಿದ್ದಾರೆ ಎನ್ನಲಾಗಿದೆ.ಲಾಕಡೌನ್ ಸಮಯದಲ್ಲಿ ಪಕ್ಕದ ಊರಿನ ಕೆಲವರು ಚೌಡಳ್ಳಿ ಗ್ರಾಮಕ್ಕೆ ಬಂದು ಸರಾಯಿ ಖರೀದಿಸಿ, ಕುಡಿಯುತ್ತಿದ್ದರು. ಇದನ್ನು ತಪ್ಪಿಸಲು ಹಾಗೂ…

Read More