ಟಿಬೆಟಿಕಾಲೋನಿಯಲ್ಲಿ ದಲೈಲಾಮಾರ 86ನೇ ಹುಟ್ಟುಹಬ್ಬ ಆಚರಣೆ

ಮುಂಡಗೋಡ : ಟಿಬೆಟನ್ ಧರ್ಮಗುರು ದಲೈಲಾಮಾ ಅವರಿಗೆ ಇಂದು 86ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.   ದಲೈಲಾಮಾರ ಹುಟ್ಟುಹಬ್ಬದ ಕಾರಣ ಇಡೀ ಮುಂಡಗೋಡ ಟಿಬೆಟಿಕಾಲೋನಿಯಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ಟಿಬೆಟಿಕಾಲೋನಿಯ ಬೌದ್ಧಮಠಗಳಲ್ಲಿ ದಲೈಲಾಮಾರ ಹುಟ್ಟುಹಬ್ಬದ ಅಂಗವಾಗಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.   ಬೌದ್ಧ ದೇವತೆಗಳ ಎದುರು ಬೆಣ್ಣೆ ದೀಪ ಬೆಳಗಿಸಲಾಯಿತು. ವಿವಿಧ ರೀತಿಯ ನೈವೇದ್ಯವನ್ನು ದೇವರಿಗೆ ಹಿರಿಯ ಬೌದ್ಧ ಸನ್ಯಾಸಿಗಳು, ಬಿಕ್ಕುಗಳು ಸಮರ್ಪಿಸಿದರು.    ಬೌದ್ಧಮಠದಲ್ಲಿ ಎಲ್ಲಾ ಬೌದ್ಧ ಸನ್ಯಾಸಿಗಳು, ಬಿಕ್ಕುಗಳು ಬೌದ್ಧ ದೇವತೆಗಳಿಗೆ…

Read More

ಮೈನಳ್ಳಿ(ಚಿಗಳ್ಳಿ) ಜಿ.ಪಂ. ಕ್ಷೇತ್ರ : ಮೀಸಲಾತಿ ತಿದ್ದುಪಡಿಗೊಳಿಸುವಂತೆ ಮನವಿ

ಮುಂಡಗೋಡ : ಚುನಾವಣಾ ಆಯೋಗವು ಮುಂಡಗೋಡ ತಾಲೂಕಿನ ಮೈನಳ್ಳಿ(ಚಿಗಳ್ಳಿ) ಜಿ.ಪಂ. ಕ್ಷೇತ್ರ ಹಿಂದುಳಿದ ವರ್ಗ ಅ ಮಹಿಳೆ ಎಂಬ ಮೀಸಲಾತಿ ನೀಡಿದ್ದು, ಈ ಕ್ಷೇತ್ರಕ್ಕೆ ಅನುಸೂಚಿತ ಜಾತಿ (ಎಸ್.ಸಿ.) ಮೀಸಲಾತಿ ಪರಿಗಣಿಸಬೇಕೆಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ ಮುಖಂಡ ಲಕ್ಷ್ಮಣ ಬನ್ಸೊಡೆ ಮನವಿ ಸಲ್ಲಿಸಿದ್ದಾರೆ.     ಅನುಸೂಚಿತ ಜಾತಿ ಜನಾಂಗದವರು ಚಿಗಳ್ಳಿ(ಮೈನಳ್ಳಿ) ವ್ಯಾಪ್ತಿಯಲ್ಲಿ ಶೇ.27ರಷ್ಟು ಜನಸಂಖ್ಯೆ ಇದ್ದರೂ ನಮ್ಮನ್ನು ಕಡೆಗಣಿಸಲಾಗಿದೆ. ಆದ್ದರಿಂದ ಈಗ ಹೊರಡಿಸಿದ ಮೀಸಲಾತಿ ಆದೇಶವನ್ನು ತಿದ್ದುಪಡಿಗೊಳಿಸಿ ಮರು ಆದೇಶ ಹೊರಡಿಸಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.

Read More

ನಮಗೆ ಅನ್ಯಾಯ ಆಗಿದೆ : ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದವರಿಂದ ಸರಕಾರಕ್ಕೆ ಮನವಿ

ಮುಂಡಗೋಡ : ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಅನ್ಯಾಯ ಆಗಿದೆ ಎಂದು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಇಂದು ಮನವಿ ಸಲ್ಲಿಸಿದರು.   ಮೇ 2017 ರಲ್ಲಿ ಜಾರಿಯಾದ ಹೊಸ C&R ನಿಂದ 2016 ಕ್ಕಿಂತ ಮೊದಲು ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7ನೇ ತರಗತಿ ವರೆಗೆ ಬೋಧಿಸಲು  ನೇಮಕಾತಿ ಆದ ಶಿಕ್ಷಕರಿಗೆ ಸಾರಾಸಗಟಾಗಿ 1-5 ಬೋಧಿಸುವ ಶಿಕ್ಷಕರನ್ನಾಗಿ (ನಮ್ಮಲ್ಲಿ ಎಷ್ಟೇ ದೊಡ್ಡ ಮಟ್ಟದ ವಿದ್ಯಾರ್ಹತೆ, ಸೇವಾ ಅನುಭವ ಇದ್ದರೂ) ವಿಭಾಗಿಸಿ PST…

Read More

ಇಂದೂರ ಜಿ.ಪಂ. ಕ್ಷೇತ್ರ : ರವಿಗೌಡ ಪಾಟೀಲರಿಗೆ ಟಿಕೆಟ್ ನೀಡುವಂತೆ ಆಗ್ರಹ

ಮುಂಡಗೋಡ : ಚುನಾವಣಾ ಆಯೋಗವು ತಾ.ಪಂ., ಜಿ.ಪಂ. ಮೀಸಲಾತಿ ಪ್ರಕಟಿಸುತ್ತಿದ್ದಂತೆ ರಾಜಕೀಯ ಪಕ್ಷದಲ್ಲಿ ಚಟುವಟಿಕೆ ತೀವ್ರಗೊಂಡಿದೆ.   ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿಯು ಹನುಮಂತನ ಬಾಲದಂತೆ ದಿನವೂ ಬೆಳೆಯುತ್ತಿದೆ. ತಾಲೂಕಿನಲ್ಲಿ ಇಂದೂರ, ಮೈನಳ್ಳಿ (ಚಿಗಳ್ಳಿ ) ಮತ್ತು ಪಾಳಾ ಎಂಬ ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರಗಳಿವೆ. ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಸಾಮಾನ್ಯವಾದರೆ ಮೈನಳ್ಳಿ (ಚಿಗಳ್ಳಿ ) ಮತ್ತು ಪಾಳಾ ಕ್ಷೇತ್ರ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ.   ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಕಳೆದ…

Read More

ಹನುಮಾಪುರ ಕಾಳಿಕಾಮಠದ “ಶ್ರೀಗಳು” ಅಸ್ತಂಗತ

ಮುಂಡಗೋಡ : ತಾಲೂಕಿನ ಹನುಮಾಪುರ ಕಾಳಿಕಾಮಠದ (ಹಿರೇಮಠ) ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ.    ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಇಂದು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

Read More

ಮೀಸಲಾತಿ ಪ್ರಕಟ : ರಾಜಕೀಯ ಪಕ್ಷಗಳಲ್ಲಿ ತೀವ್ರ ಚಟುವಟಿಕೆ

ಮುಂಡಗೋಡ: ತಾಲೂಕ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ತೀವ್ರ ಚಟುವಟಿಕೆ ಆರಂಭಗೊಂಡಿದೆ.   ಕಾಂಗ್ರೆಸ್ ಪಕ್ಷವು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ತಯಾರಿ ನಡೆಸಿದೆ. ಇತ್ತೀಚೆಗಷ್ಟೇ ಕೆಪಿಸಿಸಿ ಸದಸ್ಯ ಪ್ರಶಾಂತ್ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ಕುರಿತು ಚರ್ಚೆ ನಡೆಸಿದೆ. ಬಿಜೆಪಿ ಸಹ ಚುನಾವಣೆ ಚಟುವಟಿಕೆ ಬಿರುಸುಗೊಳಿಸಿದೆ. ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷಿಗಳು ತಮ್ಮ ಕ್ಷೇತ್ರದಲ್ಲಿ ಜನಸಂಪರ್ಕ ಆರಂಭಿಸಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್ ಇಷ್ಟು ದಿನ ಮೌನವಾಗಿತ್ತು. ಆದರೆ…

Read More

ತವರಿನಿಂದ ಬಾರದ ಪತ್ನಿ : ಪತಿ ಸಾವು

ಮುಂಡಗೋಡ : ಕಳೆದ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ತವರು ಮನೆಗೆ ಹೋಗಿದ್ದ ಪತ್ನಿ, ಮರಳಿ ಬಾರದಿರುವುದರಿಂದ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕ್ರಿಮಿನಾಶಕ ಸೇವಿಸಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಇಂದು ಜರುಗಿದೆ.   ಬಸವರಾಜ ಭರಮಣ್ಣ ಕುರಿಯವರ(36) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಪತ್ನಿಯ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದ ಈತ,  ಜುಲೈ1ರಂದು ರಾತ್ರಿ ಸಮಯದಲ್ಲಿ ಯಾವುದೋ ಕ್ರಿಮಿನಾಶಕ ಔಷಧಿ ಕುಡಿದು ತೀವ್ರವಾಗಿ ಅಸ್ವಸ್ಥಗೊಂಡಿದ್ದನು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ…

Read More