ನೀರು ಸೇದಲು ಹೋಗಿ ತೆರೆದ ಬಾವಿ ಬಿದ್ದ ವೃದ್ದೆಯ ರಕ್ಷಣೆ
ಭಟ್ಕಳ : ತೆರೆದ ಬಾವಿಯಲ್ಲಿ ನೀರು ಸೇದಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಭಟ್ಕಳ ತಾಲೂಕಿನ ಸೋಡಿಗದ್ದೆಯಲ್ಲಿ ಇಂದು ನಡೆದಿದೆ. ಸೋಡಿಗದ್ದೆ ನಿವಾಸಿಯಾಗಿರುವ ನಾಗಮ್ಮ (60) ತನ್ನ ಮನೆಯ ತೆರೆದ ಬಾವಿಯಿಂದ ನೀರು ಸೇದುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದು, ತಕ್ಷಣ ವಿಷಯ ತಿಳಿದ ಮನೆಯವರು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ.ತಕ್ಷಣ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ…