

ಮುಂಡಗೋಡ : ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಮಜ್ಜಿಗೆರೆ ಕ್ರಾಸ್ ಬಳಿ ಇಂದು ಸಂಭವಿಸಿದೆ.
ಜೇನುಮುರಿಯ ಬಸವರಾಜ್ ಶ್ಯಾಡಂಬಿ(36) ತೀವ್ರ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಬೈಕ್ ಸವಾರನ ಕೈ, ಕಾಲು, ತಲೆಗೆ ತೀವ್ರ ಗಾಯವಾಗಿದೆ. ಗಾಯಾಳುವನ್ನು 108 ಆಂಬುಲೆನ್ಸನ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಬಳೂರ ಮತ್ತು ಚಾಲಕ ಕೆಂಚೇಶ ಅವರು ಹುಬ್ಬಳ್ಳಿ ಕಿಮ್ಸಗೆ ದಾಖಲಿಸಿದ್ದಾರೆ.